‘ಸಲಾರ್’ ಟೀಸರ್ ರಿಲೀಸ್..! ಇದು ಜ್ಯುರಾಸಿಕ್ ಪಾರ್ಕ್ ಅಲ್ಲ ಅಂತಿರೋ ರೆಬೆಲ್ ಪ್ರಭಾಸ್..!

ಪ್ರಭಾಸ್ ನಟನೆಯ, ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದ ಮೊದಲ ಟೀಸರ್ ಇಂದು ಬೆಳಗ್ಗೆ ರಿಲೀಸ್ ಆಗಿದ್ದು ಟೀಸರ್ ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಸದ್ಯ ಬಿಡುಗಡೆ ಆಗಿರುವ 1.46 ನಿಮಿಷಗಳ ಟೀಸರ್ನಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಹಾಗೂ ಬಾಲಿವುಡ್ನ ಹಿರಿಯ ನಟ ಟಿನು ಆನಂದ್ ಅವರನ್ನು ಮಾತ್ರವೇ ಹೈಲೈಟ್ ಮಾಡಲಾಗಿದ್ದು, ಇಂದೊಂದು ಭರ್ಜರಿ ಆಯಕ್ಷನ್ ಎಂಟರ್ಟೇನರ್ ಆಗಿರಲಿದೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ.
‘ಸಲಾರ್’ ಸಿನಿಮಾ ಆರಂಭವಾದಾಗಿನಿಂದಲೂ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಇದುವರೆಗೂ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ ರಿಲೀಸ್ ಆಗಿರುವ ಟೀಸರ್ನಲ್ಲಿ ಆ ಕುತೂಹಲಕ್ಕೆ ತೆರೆಬಿದ್ದಿದೆ. ಸೆಪ್ಟೆಂಬರ್ 28ರಂದು ‘ಸಲಾರ್’ ಚಿತ್ರದ ಮೊದಲ ಭಾಗ ತೆರೆಗೆ ಬರಲಿದ್ದು, ಸದ್ಯ ಆಗಲಿರುವ ಭಾಗ 1ಕ್ಕೆ ‘ಕದನವಿರಾಮ’ ಎಂದು ಹೆಸರು ಇಡಲಾಗಿದೆ.
ಸದ್ಯ ರಿಲೀಸ್ ಆಗಿರುವ ಟೀಸರ್ನಲ್ಲಿ ‘ಕೆಜಿಎಫ್’ ಸಿನಿಮಾದ ಜತೆಗೆ ‘ಸಲಾರ್’ಗೆ ಕನೆಕ್ಷನ್ ಇದೆ ಎಂದು ಹೇಳಬಹುದಾದ ಯಾವ ಅಂಶಗಳೂ ಇಲ್ಲ. ಆದರೆ ‘ಕೆಜಿಎಫ್’ ಪಾರ್ಟ್ 1ರಲ್ಲಿ ‘ಗರುಡ’ ಪಾತ್ರ ಮಾಡಿದ್ದ ನಟ ರಾಮ್ ‘ಸಲಾರ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಹಾಗೆಯೇ, ‘ಕೆಜಿಎಫ್’ ಪಾರ್ಟ್ 2ರಲ್ಲಿ ಫಾತಿಮಾ ಪಾತ್ರ ಮಾಡಿದ್ದ ನಟಿ ಈಶ್ವರಿ ರಾವ್ ಅವರು ಕೂಡ ‘ಸಲಾರ್’ನಲ್ಲಿದ್ದಾರೆ. ಆದರೆ ಇವರಿಬ್ಬರ ಪಾತ್ರಗಳೇನೂ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ದೊಡ್ಡ ರೌಡಿಗಳ ಪಡೆ ಮಧ್ಯೆ ಟಿನು ಆನಂದ್ ಅವರನ್ನು ತೋರಿಸುವುದರ ಮೂಲಕ ಟೀಸರ್ ಶುರುವಾಗುತ್ತದೆ. ‘ಹೇ.. ಸಿಂಪಲ್ ಇಂಗ್ಲಿಷ್.. ಯಾವುದೇ ಗೊಂದಲ ಬೇಡ.. ಸಿಂಹ, ಚೀತಾ, ಹುಲಿ, ಆನೆ ತುಂಬ ಅಪಾಯಕಾರಿ.. ಆದರೆ ಜುರಾಸಿಕ್ ಪಾರ್ಕ್ನಲ್ಲಿ ಅಲ್ಲ.. ಯಾಕೆಂದರೆ, ಆ ಪಾರ್ಕ್ನಲ್ಲಿ.’ ಎಂದು ಟಿನು ಆನಂದ್ ಹೇಳುತ್ತಿದ್ದಂತೆಯೇ ಪ್ರಭಾಸ್ ಅವರನ್ನು ತೋರಿಸಲಾಗಿದೆ. ಭರ್ಜರಿ ಆಯಕ್ಷನ್ ಮೂಲಕ ಖಳರನ್ನು ಪ್ರಭಾಸ್ ಸದೆಬಡಿಯುತ್ತಿರುತ್ತಾರೆ. ಕೊನೆಗೆ ಪಥ್ವಿರಾಜ್ ಸುಕುಮಾರನ್ ಅವರನ್ನು ಕೂಡ ತೋರಿಸಲಾಗಿದೆ. ಉಳಿದಂತೆ, ‘ಕೆಜಿಎಫ್’ ರೀತಿಯ ಅದ್ಧೂರಿ ಮೇಕಿಂಗ್, ನೂರಾರು ಸಹ ಕಲಾವಿದರು, ಹೈವೋಲ್ಟೇಜ್ ಆಯಕ್ಷನ್ ಸೀನ್.. ಎಲ್ಲವೂ ‘ಸಲಾರ್’ನಲ್ಲಿದೆ.

Loading

Leave a Reply

Your email address will not be published. Required fields are marked *