ರಾಮನಗರ: ಜಿಲ್ಲೆಯ ಗುಡೇಮಾರನಹಳ್ಳಿ ಕೆರೆಯ ಬಳಿಯಲ್ಲಿ ರೌಡಿ ಶೀಟರ್ ಸಂತೋಷ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿ ಹಾಕಿರುವುದಾಗಿ ತಿಳಿದು ಬಂದಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಕೆರೆಯ ಬಳಿಯಲ್ಲಿ ರೌಡಿ ಶೀಟರ್ ಸಂತೋಷ್(35) ಮೃತದೇಹ ಪತ್ತೆಯಾಗಿದೆ.
ಆತನನ್ನು ಬೇರೆಡೆ ಎಲ್ಲೋ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವಂತ ದುಷ್ಕರ್ಮಿಗಳು, ಗುಡೇಮಾರನಹಳ್ಳಿಯ ಕೆರೆ ಬಳಿಯಲ್ಲಿ ಮೃತದೇಹವನ್ನು ಎಸೆದು ಹೋಗಿರುವುದಾಗಿ ಹೇಳಲಾಗುತ್ತಿದೆ.
ಅಂದಹಾಗೇ ಕೊಲೆಯಾದಂತ ಸಂತೋಷ್ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ರೌಡಿ ಶೀಟ್ ಆಗಿದ್ದನು. ಯಲಹಂಕದ ನಿವಾಸಿಯಾಗಿದ್ದಂತ ಆತನನ್ನು ಇಂದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು, ಗುಡೇಮಾರನಹಳ್ಳಿ ಕೆರೆಯ ಬಳಿಯಲ್ಲಿ ಮೃತದೇಹವನ್ನು ಎಸೆದು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದೀಗ ಸ್ಥಳಕ್ಕೆ ಆಗಮಿಸಿರುವಂತ ಮಾಗಡಿ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ರೌಡಿ ಶೀಟರ್ ಸಂತೋಷ್ ಹತ್ಯೆಯ ಹಿಂದಿನ ಕಾರಣ ತನಿಖೆಯ ನಂತ್ರ ಹೊರ ಬೀಳಬೇಕಿದೆ.