ಬೆಂಗಳೂರು:- ನಮ್ಮ ಮೆಟ್ರೋದಲ್ಲಿ ಸಾಲು ಸಾಲು ಅವಘಡಗಳು ಆಗುತ್ತಿರುವುದು ಬಿಎಂಆರ್ಸಿಎಲ್ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಇದಕ್ಕೆಲ್ಲ ಕಡಿವಾಣ ಹಾಕಲು ಬಿಎಂಆರ್ಸಿಎಲ್ ಮಾಸ್ಟರ್ ಪ್ಲಾನ್ ಮಾಡಿದೆ. ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ ನಿರ್ಮಾಣಕ್ಕೆ ಪ್ಲಾನ್ ಮಾಡ್ತಿದೆ.
ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಈಗಾಗಲೇ ಪ್ಲಾಟ್ಫಾರಂ ಸ್ಕ್ರೀನ್ ಡೋರ್ ಅಳವಡಿಕೆ ಮಾಡುವ ಕೆಲಸ ಬಿಎಂಆರ್ಸಿಎಲ್ ಮಾಡ್ತಿದೆ. ಇನ್ಫೋಸಿಸ್ ಫೌಂಡೇಶನ್ ಅನುದಾನದೊಂದಿಗೆ ಈ ಕಾಮಗಾರಿ ನಡೆಯುತ್ತಿದೆ. ಇದೇ ರೀತಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 63 ಮೆಟ್ರೋ ನಿಲ್ದಾಣದಲ್ಲಿ ಪಿಎಸ್ ಡಿ ಅಳಡಿಕೆಗೆ ಯೋಜನೆ ಸಿದ್ಧಪಡಿಸ್ತಿದೆ. ಮೊದಲ ಹಂತದಲ್ಲಿ ಕೊಟ್ಟಿಗೆರೆ ಟೂ ನಾಗವಾರ ಮೆಟ್ರೋ ಮಾರ್ಗದಲ್ಲಿ ಬರುವ ಡೈರಿ ಸರ್ಕಲ್ ನಿಂದ ಆರಂಭವಾಗುವ ಎಲ್ಲಾ ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ ಗಳಲ್ಲೂ ಈ ಪಿಎಸ್ ಡೋರ್ ಅಳವಡಿಸಲು ಮುಂದಾಗುತ್ತೀವಿ. ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲೂ ಪಿಎಸ್ಡಿ ಅಳವಡಿಸಲು ನಮ್ಮ ಟೆಕ್ನಿಕಲ್ ಟೀಮ್ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಬಿಎಂಆರ್ಸಿಎಲ್ ನ ಚೀಫ್ ಪಿಆರ್ಓ ಯಶ್ವಂತ್ ಚೌವ್ಹಾಣ್ ತಿಳಿಸಿದರು.
ಮೆಟ್ರೋದಲ್ಲಾಗುವ ಕೆಲವು ಅವಘಡಗಳಿಗೆ ಪಿಎಎಸ್ಡಿ ಬ್ರೇಕ್ ಹಾಕಲಿದೆ. ಅಲ್ಲದೆ ಎಸಿಯಿಂದ ಆಗುವ ಮೂವತ್ತು ಪರ್ಸೆಂಟ್ ವೆಚ್ಚ ಉಳಿತಾಯವಾಗುತ್ತೆ. ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಳಿ ಸಮೀಪದಲ್ಲಿ ಫೋಟೊ ತೆಗೆಯುವುದು, ರೀಲ್ಸ್ ಮಾಡುವುದನ್ನು ತಪ್ಪಿಸಬಹುದು, ಸಣ್ಣ ಮಕ್ಕಳು ಮೆಟ್ರೋ ಹಳಿಗಳತ್ತ ಪೋಷಕರ ಕಣ್ತಪ್ಪಿಸಿ ಹೋಗಿ ಆಗುವ ಅನಾಹುತ ನಿಲ್ಲುತ್ತೆ. ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಹಿಳಾ ಪ್ರಯಾಣಿಕರು ಇದು ತುಂಬಾ ಸಂತೋಷದ ಸುದ್ದಿ. ಈ ಪಿಎಸ್ಡಿ ಡೋರ್ ಅಳವಡಿಕೆಯಿಂದ ಧೈರ್ಯವಾಗಿ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಹಾಯ ಆಗುತ್ತದೆ ಎಂದರು.
ಈ ರೀತಿಯ ಘಟನೆಯಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗ್ತಿದೆ. ಮೆಟ್ರೋ ಹಳಿಗಳಿಗೆ ಪಕ್ಕದಲ್ಲಿ 750 ಮೋಲ್ಟ್ ಹೆವಿ ಪವರ್ ಲೈನ್ ಹಾದು ಹೋಗುತ್ತೆ. ಟ್ರ್ಯಾಕ್ ಗೆ ಯಾರಾದ್ರೂ ಇಳಿದ್ರೆ ಅವರ ಜೀವ ಉಳಿಸಲು ಪವರ್ ಆಫ್ ಮಾಡಲಾಗುತ್ತೆ. ಅದನ್ನ ಜನರೇಟ್ ಮಾಡಲು ಅರ್ಧಗಂಟೆಗೂ ಹೆಚ್ಚು ಸಮಯ ಬೇಕಾಗುತ್ತೆ. ಇದರಿಂದ ಪೀಕ್ ಅವರ್ಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗೆ ಅಡಚಣೆಯಾಗುತ್ತೆ. ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತೆ. ಹೀಗಾಗಿ ಇದನ್ನ ತಡೆಯಲು ಬಿಎಂಆರ್ ಸಿಎಲ್ ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ ಪಿಎಸ್ ಡಿ ಅಳವಡಿಕೆಗೆ ಮುಂದಾಗಿದೆ. ಒಳ್ಳೆಯ ನಡೆ ಅಂತ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗ್ತಿದೆ.