ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ ರೋಹಿತ್ ಶರ್ಮಾ

ಮುಂಬೈ: 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ್ದಾರೆ.

2007ರ ಜೂನ್ 23ರಂದು ಭಾರತ ತಂಡದ (Team India) ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಐರ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು.

ಅಂದು ಬೆಲ್ಫಾಸ್‌ನಲ್ಲಿ ಪೂರ್ಣ ತೋಳಿನ ಜಂಪರ್‌ಗಳಲ್ಲಿ ರೋಹಿತ್ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿತ್ತು.

ಇದುವೆರೆಗೆ 441 ಅಂತಾರಾಷ್ಟ್ರೀಯ (International Cricket) ಪಂದ್ಯಗಳನ್ನಾಡಿರುವ ಹಿಟ್‌ಮ್ಯಾನ್, 17,115 ರನ್ ಪೂರೈಸಿದ್ದಾರೆ. 43 ಅಂತಾರಾಷ್ಟ್ರೀಯ ಶತಕಗಳೂ ಇದರಲ್ಲಿ ಸೇರಿವೆ. 36ರ ಹರೆಯದ `ಹಿಟ್ ಮ್ಯಾನ್’ ಈಗ ತಮ್ಮ ವೃತ್ತಿಜೀವನದ ಪ್ರಮುಖ ಹೊಸ್ತಿಲಲ್ಲಿದ್ದಾರೆ.

ದ್ವಿಶತಕಸಿಡಿಸಿದನಂ.1 ಬ್ಯಾಟರ್:
ಟೀಂ ಇಂಡಿಯಾ ಹಾಲಿ ನಾಯಕನಾಗಿರುವ ರೋಹಿತ್ ಶರ್ಮಾ ಮೂರು ದ್ವಿಶತಕ ಬಾರಿಸಿದ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್‌ ಸಹ ಆಗಿದ್ದಾರೆ.

Loading

Leave a Reply

Your email address will not be published. Required fields are marked *