ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ರಿಷಬ್ ಪಂತ್ & ಅಕ್ಷರ್ ಪಟೇಲ್

ತಿರುಪತಿ: ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ (Rishabh Pant) ಮತ್ತು ಅಕ್ಷರ್ ಪಟೇಲ್ (Axar Patel) ಇಂದು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ (Tirupati Balaji Temple) ಆಶೀರ್ವಾದ ಪಡೆದಿದ್ದಾರೆ.ಈ ಬಗ್ಗೆ ರಿಷಬ್, ದೇವಾಲಯದ ಶಕ್ತಿಯನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ.

ದೇವಸ್ಥಾನದಿಂದ ಹೊರಬರಲು ಮನಸ್ಸಾಗಲಿಲ್ಲ. ನಂಬಲಾಗದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿ ಅಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆರಿಷಬ್ ಪಂತ್ ಕಳೆದ 2022ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳುಗಳಿಂದ ಕ್ರಿಕೆಟ್‍ನಿಂದ ದೂರ ಉಳಿದಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಕ್ರಿಕೆಟ್‍ಗೆ ಮರಳುವ ನಿರೀಕ್ಷೆ ಇದೆ.

ವಿಶ್ವಕಪ್‍ಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಕೊನೆಯ ಕ್ಷಣದಲ್ಲಿ ಪಂದ್ಯಗಳಿಂದ ವಂಚಿತರಾದರು. ಅಕ್ಷರ್ ಅವರ ಸ್ಥಾನಕ್ಕೆ ಆರ್ ಅಶ್ವಿನ್ ಆಯ್ಕೆಯಾದರು. ಪ್ರಸ್ತುತ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Loading

Leave a Reply

Your email address will not be published. Required fields are marked *