ನ್ಯೂ ಇಯರ್ ಪಾರ್ಟಿಯಲ್ಲಿ ಗಲಾಟೆ: ಮೂಗನ್ನೇ ಕಚ್ಚಿ ತುಂಡರಿಸಿದ ಯುವಕ..!

ಮಂಗಳೂರು: ನ್ಯೂ ಇಯರ್ (New Year) ಪಾರ್ಟಿಯಲ್ಲಿ (Party)  ಗಲಾಟೆ ನಡೆದ ಹಿನ್ನೆಲೆ ಯುವಕನ ಮೂಗನ್ನು (Nose) ಮತ್ತೊಬ್ಬ ಯುವಕ ಕಚ್ಚಿ ಹೊರೆತೆಗೆದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಪಿಲ್ಯ ಗ್ರಾಮದಲ್ಲಿ ನಡೆದಿದೆ.

ಉಲ್ಪೆ ಗ್ರಾಮದ ನಿವಾಸಿ ದೀಕ್ಷಿತ್ (28) ಮೂಗಿನ ಒಂದು ಭಾಗವನ್ನು ಕಳೆದುಕೊಂಡ ಯುವಕ. ಮೂಡಿಗೆರೆ ಮೂಲದ ರಾಕೇಶ್ ಮೂಗನ್ನು ಕಚ್ಚಿಕಿತ್ತ ಆರೋಪಿ. ರಾಕೇಶ್ ಹಾಗೂ ದೀಕ್ಷಿತ್ ಇಬ್ಬರೂ ಇಯರ್ ಎಂಡ್ ಪಾರ್ಟಿಯೊಂದಕ್ಕೆ ತೆರಳಿದ್ದು, ಪಾರ್ಟಿಯಲ್ಲಿ ಮದ್ಯಸೇವನೆ ಮಾಡಿದ್ದಾರೆ.

ಬಳಿಕ ಕ್ಷುಲ್ಲಕ ವಿಚಾರಕ್ಕೆ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ರಾಕೇಶ್ ದೀಕ್ಷಿತ್‌ನ ಮೂಗನ್ನು ಕಚ್ಚಿಕಿತ್ತಿದ್ದಾನೆ. ಘಟನೆಯಲ್ಲಿ ಮೂಗಿನ ಒಂದು ಭಾಗವನ್ನು ಕಳೆದುಕೊಂಡ ದೀಕ್ಷಿತ್‌ಗೆ ಗುರುವಾಯನಕೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Loading

Leave a Reply

Your email address will not be published. Required fields are marked *