ಎಲ್ಲೆಲ್ಲೆ ಕ್ರಿಕೆಟ್ ಟೂರ್ನಿ ನಡೆಯುತ್ತೆ, ನಾವು ಅಲ್ಲೇ ಹೋಗಿ ಆಡ್ತೀವಿ: ಬಾಬರ್ ಆಜಂ

ಇಸ್ಲಾಮಾಬಾದ್: ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯಾವುದೇ ಮೈದಾನದಲ್ಲಿ ಯಾವ ತಂಡವನ್ನ ಬೇಕಾದ್ರೂ ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಾಗಿದೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಹೇಳಿದ್ದಾರೆ.
ಈ ಮೂಲಕ ಪಾಕ್ ತಂಡ ಭಾರತಕ್ಕೆ ಎಂಟ್ರಿ ಕೊಡುವುದನ್ನ ಖಚಿತಪಡಿಸಿದ್ದಾರೆ.
ಹೌದು. ಟೀಂ ಇಂಡಿಯಾ  ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿದ್ದು, ಅಕ್ಟೋಬರ್ 15 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕ್ ತಂಡವನ್ನ ಎದುರಿಸಲಿದೆ. 1.32 ಲಕ್ಷ ಪ್ರೇಕ್ಷಕರನ್ನ ಒಳಗೊಳ್ಳುವ ಸಾಮರ್ಥ್ಯ ಹೊಂದಿರುವ ಮೋದಿ ಕ್ರೀಡಾಂಗಣದಲ್ಲಿ ಬದ್ಧವೈರಿಗಳ ಹೈವೋಲ್ಟೇಜ್ ಕದನ ನಡೆಯಲಿದೆ
ಕಳೆದ ವರ್ಷ T20 ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು  ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಮತ್ತು ವಿದೇಶಾಂಗ ಸಚಿವಾಲಯಗಳಿಗೆ ಪತ್ರ ಬರೆದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ಕೇಳಿದೆ. ಈ ನಡುವೆ ಬಾಬರ್ ಆಜಂ ಭಾರತಕ್ಕೆ ಬರುವುದನ್ನ ಖಚಿತಪಡಿಸಿದ್ದಾರೆ.
ಯಾರು ಎಲ್ಲಿ ಆಡ್ತಾರೆ ಅನ್ನೋದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಆದ್ರೆ ನಾವು ವಿಶ್ವಕಪ್ ಟೂರ್ನಿಯನ್ನು ಆಡಲಿದ್ದೇವೆ. ಭಾರತದ ವಿರುದ್ಧ ಮಾತ್ರವಲ್ಲ. ಒಂದು ತಂಡವನ್ನು ಕೇಂದ್ರೀಕರಿಸೋದಿಲ್ಲ. ಇನ್ನೂ 9 ತಂಡಗಳಿವೆ, ಎಲ್ಲಾ ತಂಡಗಳನ್ನ ಸೋಲಿಸಿದ್ರೆ ಮಾತ್ರ ನಾವು ಫೈನಲ್ ತಲುಪುತ್ತೇವೆ ಎಂದು ಹೇಳಿದ್ದಾರೆ.
ವೃತ್ತಿಪರರಾಗಿ ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು. ಎಲ್ಲೆಲ್ಲೆ ಕ್ರಿಕೆಟ್ ಟೂರ್ನಿ ನಡೆಯುತ್ತೆ, ನಾವು ಅಲ್ಲೇ ಹೋಗಿ ಆಡ್ತೀವಿ. ಪ್ರತಿ ದೇಶದಲ್ಲೂ ನಾವು ಪ್ರದರ್ಶನ ನೀಡಲು ಬಯಸುತ್ತೇವೆ. ಅಹಮದಾಬಾದ್ ಮಾತ್ರವಲ್ಲ ಹೈದರಾಬಾದ್ ಡೆಕ್ಕನ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಪಾಕಿಸ್ತಾನ ತಂಡ ತನ್ನ ಪಂದ್ಯಗಳನ್ನಾಡಲು ನಿರ್ಧರಿಸಿದೆ ಎಂದು ಖಡಕ್ಕಾಗಿ ಹೇಳಿದ್ದಾರೆ.
ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ. ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಶ್ರೀಲಂಕಾದೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇದು 2023-2025ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವೂ ಆಗಿದೆ. ಜುಲೈ 16 ರಿಂದ ರಂದು ಗಾಲೆಯಲ್ಲಿ ಮೊದಲ ಟೆಸ್ಟ್ ಮತ್ತು ಜುಲೈ 24 ರಿಂದ 2ನೇ ಟೆಸ್ಟ್ ಕೊಲಂಬೊದಲ್ಲಿ ಪ್ರಾರಂಭವಾಗಲಿದೆ. ಅಲ್ಲದೇ ಮುಂದಿನ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ 6 ರಾಷ್ಟ್ರಗಳ ಏಷ್ಯಾ ಕಪ್ ಟೂರ್ನಿಯಲ್ಲೂ ಪಾಕಿಸ್ತಾನ ಆಡಲಿದೆ.

Loading

Leave a Reply

Your email address will not be published. Required fields are marked *