ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಆಯ್ಕೆ: ಗುರುವಾರ ಪ್ರಮಾಣ ವಚನ

ಹೈದರಾಬಾದ್: ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ರೇವಂತ್ ರೆಡ್ಡಿಯವರು (Revanth Reddy) ಸಜ್ಜಾಗಿದ್ದು, ಡಿಸೆಂಬರ್ 7 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ರೇವಂತ್ ರೆಡ್ಡಿಯವರ ಜೊತೆ ಇತರ ಕೆಲವು ಸಚಿವರುಗಳು ಕೂಡ ಪ್ರಮಣ ವಚನ ಸ್ವೀಕಾರ ಮಾಡಲಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದ್ದು, ಸಿಎಂ ನೇಮಕದ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್‍ ಕೈಗೊಂಡಿದೆ.

ಈ ಹಿಂದೆ ಡಿಸೆಂಬರ್‌ 9 ರಂದು ಸೋನಿಯಾ ಗಾಂಧಿಯವರ ಜನ್ಮದಿನವಿದ್ದು, ಇದೇ ದಿನ ರೇವಂತ್‌ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ (Telangana Vidhanasabha Election Results) ತೆಲಂಗಾಣದಲ್ಲಿ ಕಾಂಗ್ರೆಸ್ (Congress) ಅಭೂತಪೂರ್ವ ಜಯಗಳಿಸಿತ್ತು. 119 ಸ್ಥಾನಗಳ ಪೈಕಿ 69 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟಬಹುಮತ ಪಡೆದಿತ್ತು.

Loading

Leave a Reply

Your email address will not be published. Required fields are marked *