ಬೆಂಗಳೂರು ;- ಸೈಟ್ ವಿಚಾರಕ್ಕೆ ನಿವೃತ್ತ ಏರ್ಪೋರ್ಸ್ ಅಧಿಕಾರಿ ಮನೆಗೆ ನುಗ್ಗಿ ನಾಲ್ಕೈದು ಜನರಿಂದ ಗಲಾಟೆ ನಡೆದಿದೆ.
ಜುಲೈ 28 ರಂದು ರಾತ್ರಿ ನಿವೃತ್ತ ಅಧಿಕಾರಿ ಅಭಿಷೇಕ್ ಕುಮಾರ್, ಕ್ಯಾಪ್ಟನ್ ಧನಂಜಯ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಕಾಡುಗೋಡಿಯ ದೊಡ್ಡ ಬನಹಳ್ಳಿಯಲ್ಲಿ ಘಟನೆ ಜರುಗಿದೆ.
ಇದೇ ವೇಳೆ ಯುವತಿ ಮೇಲೆಯೂ ದೌರ್ಜನ್ಯ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮೀಷನರ್ ಬಿ. ದಯಾನಂದ ಭೇಟಿಯಾಗಿ ದೂರು ನೀಡಿದ್ದಾರೆ.