ಶಿವಮೊಗ್ಗ: ನಾಳೆ ವಿಧಾನಸಭೆ ಚುನಾವಣೆಗೆ ಮತದಾನ ಹಿನ್ನಲೆ ಶಿವಮೊಗ್ಗ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾಗರ ತಾಲೂಕಿನ ಜೋಗ್ ಫಾಲ್ಸ್, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿ, ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪ ಸಿಂಹಧಾಮ, ಸಾಗರ ತಾಲೂಕಿನ ಸಿಗಂದೂರು ಕ್ಷೇತ್ರಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಕವಿಶೈಲ, ಕವಿಮನೆ ಹಾಗೂ ಕೊಪ್ಪ ತಾಲೂಕು ಹಿರೇಕೂಡಿಗೆಯ ಕುವೆಂಪು ಜನ್ಮಸ್ಥಳದ ಸ್ಮಾರಕ ಮೇ 10ರಂದು ಬಂದ್ ಮಾಡಲು ಕುವೆಂಪು ಪ್ರತಿಷ್ಠಾನ ಕಾರ್ಯದರ್ಶಿ ಕಡಿದಾಳ ಪ್ರಕಾಶ್ ಸೂಚಿಸಿದ್ದಾರೆ.