ಇಸ್ಲಾಮಾಬಾದ್: ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಎರಡು ವಾರಗಳ ಜಾಮೀನು ನೀಡಿದೆ.
ಅಂದ್ಹಾಗೆ, ಆವರಣದಲ್ಲಿ ನಾಟಕೀಯ ಬಂಧನದ ಕೆಲವು ದಿನಗಳ ನಂತರ ಮೂವರು ಸದಸ್ಯರ ಇಸ್ಲಾಮಾಬಾದ್ ಹೈಕೋರ್ಟ್ ಪೀಠದ ಮುಂದೆ ಹಾಜರಾಗಲು ಪಾಕಿಸ್ತಾನದ ಮಾಜಿ ಪ್ರಧಾನಿ ಹೆಚ್ಚಿನ ಭದ್ರತೆಯ ನಡುವೆ ಅಲ್ಲಿಗೆ ಆಗಮಿಸಿದ್ದರು.
ಸಧ್ಯ ಪಾಕ್ ಮಾಜಿ ಪ್ರಧಾನಿಗೆ ಹೈಕೋರ್ಟ್ ರಿಲೀಫ್ ನೀಡಿದ್ದು, 2 ವಾರ ಜಾಮೀನು ಮಂಜೂರು ಮಾಡಿದೆ.