ಧಾರವಾಡ : 2022ರ ಪದವೀಧರರ 6 ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವೃಂದದ 1:1 ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮೇ 18 ರಿಂದ ಮೇ 22 ರವರೆಗೆ ಮಾಡಲಾಗುತ್ತದೆ ಎಂದು ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೇ.18, 2023 ರಂದು ಜೀವ ವಿಜ್ಞಾನ (ಕನ್ನಡ) 1-13, ಗಣಿತ ವಿಜ್ಞಾನ (ಉರ್ದು) 1-11, ಸಮಾಜ ವಿಜ್ಞಾನ(ಉರ್ದು) 1-22 ಹಾಗೂ ಮೇ.19 ರಂದು ಸಮಾಜ ವಿಜ್ಞಾನ (ಕನ್ನಡ) 1-50, ಸಮಾಜ ವಿಜ್ಞಾನ (ಕನ್ನಡ) 51-112 ಮತ್ತು ಮೇ.20 ರಂದು ಗಣಿತ ವಿಜ್ಞಾನ (ಕನ್ನಡ) 1-50, ಗಣಿತ ವಿಜ್ಞಾನ (ಕನ್ನಡ) 51-95 ಹಾಗೂ ಮೇ.22 ರಂದು ಇಂಗ್ಲಿμï (ಆಂಗ್ಲ ಭಾμÉ) 1-38 ಅನುಕ್ರಮ (ಆಯ್ಕೆ ಪಟ್ಟಿಯಲ್ಲಿನ) ಸಂಖ್ಯೆಯ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳೊಂದಿಗೆ ಕಚೇರಿಯಲ್ಲಿ ನಿಗದಿತ ದಿನಾಂಕಗಳಂದು ಬೆಳಿಗ್ಗೆ 10,30 ಗಂಟೆಯಿಂದ ಸಂಜೆ 5,30 ರವರೆಗೆ ಜರಗುವ ಮೂಲ ದಾಖಲಾತಿಗಳ ಪರಿಶೀಲನಾ ಕಾರ್ಯಕ್ಕೆ ಹಾಜರಿರಲು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.