ನವದೆಹಲಿ ;- ತಾರಾ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ರಾಜಸ್ಥಾನ ಬಿಟ್ಟು ಗುಜರಾತ್ ತಂಡ ಸೇರುವುದಾಗಿ ಘೋಷಿಸಿದ್ದಾರೆ.
ತಾರಾ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಈ ಋತುವಿನ ದೇಸಿ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ ತಂಡ ತೊರೆದು ಗುಜರಾತ್ ತಂಡ ಸೇರ್ಪಡೆಗೊಂಡಿದ್ದಾರೆ.
ಕಳೆದ ವರ್ಷ ರಾಜಸ್ಥಾನ ತಂಡದ ಪರ 1 ಪ್ರಥಮ ದರ್ಜೆ ಹಾಗೂ ಕೆಲ ಲಿಸ್ಟ್ ‘ಎ’, ಟಿ20 ಪಂದ್ಯಗಳನ್ನಾಡಿದ್ದ 22 ವರ್ಷದ ಬಿಷ್ಣೋಯ್, ಇನ್ನು ಗುಜರಾತ್ ತಂಡವನ್ನು ಪ್ರತಿನಿಧಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದಾರೆ.
ಸ್ಪಿನ್ನರ್ ರವಿ ಬಿಷ್ಣೋಯ್ ಭಾರತ ಕ್ರಿಕೆಟ್ ತಂಡದ ಪರ 2023 ರ ಫೆಬ್ರವರಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಇದೀಗ ಬಿಷ್ಣೋಯ್ ಭಾರತದ ಪರ 10 ಟಿ20, 1 ಏಕದಿನ ಪಂದ್ಯವಾಡಿದ್ದಾರೆ. ಇನ್ನು 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವಿ