ರಶೀದ್ ಖಾನ್ ಹಿಂದಿಕ್ಕಿ ನಂ.1 ಟಿ20 ಬೌಲರ್ ಆದ ರವಿ ಬಿಷ್ಣೋಯ್..!

ದುಬೈ: ಐಸಿಸಿ (ICC) ಟಿ20 ಬೌಲಿಂಗ್‌ನಲ್ಲಿ ಭಾರತ ತಂಡದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ (Ravi Bishnoi) ನಂಬರ್‌ 1 ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ಐಸಿಸಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ರವಿ ಬಿಷ್ಣೋಯ್, ಈಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ICC T20I ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್‌ 1 ಸ್ಥಾನದಲ್ಲಿದ್ದ ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿ ರವಿ ಬಿಷ್ಣೋಯ್‌ ಅಗ್ರಸ್ಥಾನ ಗಳಿಸಿದ್ದಾರೆ. 699 ರೇಟಿಂಗ್‌ ಪಾಯಿಂಟ್ಸ್‌ ಮೂಲಕ ಬಿಷ್ಣೋಯ್‌ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ODI ಬ್ಯಾಟರ್, ಟೆಸ್ಟ್ ಬೌಲರ್ ಮತ್ತು T20I ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. ಬಿಷ್ಣೋಯ್ ಅವರೊಂದಿಗೆ ಭಾರತೀಯ ಆಟಗಾರರು ಈಗ ಐಸಿಸಿ ಶ್ರೇಯಾಂಕದ 8 ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್‌, ಏಕದಿನ ಅಂತಾರಾಷ್ಟ್ರೀಯ, ಟಿ20 ಅಂತಾರಾಷ್ಟ್ರೀಯ, ಒಡಿಐ ಮತ್ತು ಟಿ20ಐ ಬ್ಯಾಟರ್‌, ಟೆಸ್ಟ್‌ ಮತ್ತು ಟಿ20ಐ ಬೌಲರ್‌, ಟೆಸ್ಟ್‌ ಆಲ್‌ರೌಂಡರ್‌ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ನಂ.1 ಸ್ಥಾನದಲ್ಲಿದೆ.

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 3,434 ಪಾಯಿಂಟ್ಸ್‌ ಮತ್ತು 118 ರೇಟಿಂಗ್‌ ಮೂಲಕ ಭಾರತ ತಂಡ ನಂಬರ್‌ 1 ಸ್ಥಾನ ಗಳಿಸಿದೆ. 16,137 ಪಾಯಿಂಟ್ಸ್‌ ಮತ್ತು 265 ರೇಟಿಂಗ್‌ನೊಂದಿಗೆ ಐಸಿಸಿ ಟಿ20ಐ ರ‍್ಯಾಂಕಿಂಗ್‌ನಲ್ಲೂ ಭಾರತ ಮುಂದಿದೆ. 6,640 ಪಾಯಿಂಟ್ಸ್‌ ಮತ್ತು 121 ರೇಟಿಂಗ್‌ನೊಂದಿಗೆ ಅಂತಾರಾಷ್ಟ್ರೀಯ ಏಕದಿನ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ 1 ನೇ ಸ್ಥಾನ ಪಡೆದುಕೊಂಡಿದೆ.

ಒಡಿಐ ಬ್ಯಾಟ್ಸ್‌ಮನ್‌ ರ‍್ಯಾಂಕಿಂಗ್‌ನಲ್ಲಿ 826 ಪಾಯಿಂಟ್ಸ್‌ನೊಂದಿಗೆ ಶುಭಮನ್‌ ಗಿಲ್‌ ಮೊದಲ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ 855 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ ಸೂರ್ಯಕುಮಾರ್‌ ಯಾದವ್‌ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ 879 ರೇಟಿಂಗ್‌ ರವಿಚಂದ್ರನ್‌ ಅಶ್ವಿನ್‌ ನಂಬರ್‌ 1 ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ನಲ್ಲಿ 455 ರೇಟಿಂಗ್‌ ಪಾಯಿಂಟ್ಸ್‌ನಿಂದ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ.

Loading

Leave a Reply

Your email address will not be published. Required fields are marked *