ಮಳೆಗಾಲ ಬರುತ್ತಿದ್ದಂತೆ ವಿವಿಧ ರೀತಿಯ ಸೊಳ್ಳೆಗಳಿಂದ ಹರಡುವಂತಹ ಜ್ವರಗಳಾಗಿರುವಂತಹ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಇತ್ಯಾದಿಗಳು ಕಾಣಿಸಿಕೊಳ್ಳುವುದು. ಇಂತಹ ಜ್ವರಗಳು ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಕಾರಣದಿಂದಾಗಿ ನಮ್ಮ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಇದು ಹೆಚ್ಚಾಗಿ ಮಳೆಗಾಲದಲ್ಲಿ ಬರುವಂತಹ ಜ್ವರ. ಅದರಲ್ಲೂ ಡೆಂಗ್ಯೂ ಜ್ವರದಿಂದ ಪ್ರಾಣಕ್ಕೂ ಅಪಾಯ ಉಂಟಾಗುವುದು.
ಡೆಂಗ್ಯೂ ಜ್ವರಕ್ಕೆ ರಾಮಬಾಣ
ಡೆಂಗ್ಯೂ ಜ್ವರಕ್ಕೆ ನೈಸರ್ಗಿಕವಾದ ಮನೆಮದ್ದು ಮಾಡಬಹುದು. ಯಾಕೆಂದರೆ ಹೆಚ್ಚಿನ ಜ್ವರಗಳಿಗೆ ಹಿಂದಿನವರು ಗಿಡಮೂಲಿಕೆಗಳನ್ನು ಬಳಸಿಕೊಂಡು ಮನೆಮದ್ದು ಮಾಡುತ್ತಲಿದ್ದರು. ಇದರಲ್ಲಿ ಬೇವು, ತುಳಸಿ, ಅಲೋವೆರಾ, ಪುದೀನಾ ಇತ್ಯಾದಿಗಳು ಪರಿಣಾಮಕಾರಿಯಾಗಿ ಮೆನೆಮದ್ದಾಗಿ ಬಳಸಲ್ಪಡುತ್ತಿದೆ.
ಹೀಗೆ ಪಪ್ಪಾಯಿ ಎಲೆಗಳು ಕೂಡ ತುಂಬಾ ಪರಿಣಾಮಕಾರಿ ಆಗಿ ಡೆಂಗ್ಯೂ ಮತ್ತು ಮಲೇರಿಯಾವನ್ನು ತಡೆಯುವುದು. ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಅದರಿಂದ ಡೆಂಗ್ಯೂ ಕಡಿಮೆ ಮಾಡಬಹುದು ಎಂದು ಆಯುರ್ವೇದದಲ್ಲಿ ಕೂಡ ಹೇಳಲಾಗಿದೆ.
ಪಪ್ಪಾಯಿ ಎಲೆಯ ರಸವು ತುಂಬಾ ಕಹಿಯಾಗಿರುವುದು. ಆದರೆ ಇದು ಇದರಿಂದ ಹಲವಾರು ಲಾಭಗಳು ಇವೆ ಮತ್ತು ದೇಹದಲ್ಲಿ ಇದು ರಕ್ತಕಣವನ್ನು ಹೆಚ್ಚಿಸುವುದು ಎಂದು ಹೇಳಲಾಗುತ್ತದೆ.
ಪಪ್ಪಾಯಿ ಎಲೆಯ ರಸ ತಯಾರಿಸುವ ವಿಧಾನ
- ಪಪ್ಪಾಯಿ ಎಲೆಯ ರಸ ತೆಗೆಯಲು ಇಲ್ಲಿ ಹಂತ ಹಂತವಾದ ವಿವರಣೆಯಿದೆ.
- 10-15 ಚಿಗುರು ಪಪ್ಪಾಯಿ ಎಲೆ ತೆಗೆದುಕೊಂಡು ಸರಿಯಾಗಿ ತೊಳೆಯಿರಿ.
- ಇದನ್ನು ಈಗ ಜ್ಯೂಸರ್ ಗೆ ಹಾಕಿ ರಸ ತೆಗೆಯಿರಿ.
- ಈಗ ರಸವನ್ನು ಸೋಸಿಕೊಂಡು ಲೋಟಗೆ ಹಾಕಿ.
- ಹಾಗೆ ಪಪ್ಪಾಯಿ ಎಲೆಗಳನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬಹುದು.
- ಇದನ್ನು ಹಾಗೆ ಕುಡಿಯಬಹುದು ಅಥವಾ ಫ್ರಿಡ್ಜ್ ನಲ್ಲಿಟ್ಟು ಕುಡಿಯಬಹುದು.
- ಇದಕ್ಕೆ ಸ್ವಲ್ಪ ರುಚಿ ಬರಲು ಕಪ್ಪು ಉಪ್ಪು, ಲಿಂಬೆರಸ ಮತ್ತು ಹುರಿದ ಜೀರಿಗೆ ಹಾಕಿ.
- ಪಪ್ಪಾಯಿ ಎಲೆ ರಸ ಕುಡಿದರೆ ಲಾಭಗಳು
- ಪಪ್ಪಾಯಿ ಎಲೆ ರಸವನ್ನು ನಿತ್ಯವೂ ಕುಡಿದರೆ ಅದರಿಂದ ಅದ್ಭುತವಾದ ಆರೋಗ್ಯ ಲಾಭಗಳು ಸಿಗುವುದು.
ಡೆಂಗ್ಯೂ ವಿರುದ್ಧ ಹೋರಾಡುವುದು
ಪಪ್ಪಾಯಿ ಎಲೆಯ ರಸದ ಅತೀ ದೊಡ್ಡ ಲಾಭವೆಂದರೆ ಇದು ಡೆಂಗ್ಯೂ ವಿರುದ್ಧ ಹೋರಾಡುವುದು. ಪಪ್ಪಾಯಿ ಎಲೆಗಳಲ್ಲಿ ಕ್ಯಾರೊಕೇನ್ ಮತ್ತು ಪಪೈನ್ ಎನ್ನುವ ಅಂಶವಿದೆ. ಇದು ಗಿಲೋಯಿಯಂತೆ ರಕ್ತದ ಪ್ಲೇಟ್ಲೆಟ್ ನ್ನು ಪರಿಣಾಮಕಾರಿ ಆಗಿ ಹೆಚ್ಚಿಸುವುದು.
ಹೆಚ್ಚಿನ ಜನರಿಗೆ ಡೆಂಗ್ಯೂಗೆ ಹೇಗೆ ಇದನ್ನು ಬಳಕೆ ಮಾಡಬೇಕು ಎನ್ನುವ ಬಗ್ಗೆ ಗೊಂದಲವಿದೆ. ಆದರೆ ಇದನ್ನು ತುಂಬಾ ಸರಳವಾಗಿ ರಸ ತೆಗೆದು ಬಳಸಬಹುದು.
ಡೆಂಗ್ಯೂ ಜ್ವರ ಇರುವ ರೋಗಿಗಗಳು ದಿನಕ್ಕೆ 25 ಮಿ.ಲೀ. ಪಪ್ಪಾಯಿ ಎಲೆಯ ರಸವನ್ನು ನೀರಿನೊಂದಿಗೆ ಸೇವಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ಪರಿಣಾಮ ಕಂಡಬರುವುದು.