ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಇಂದು ಹಾಗೂ ನಾಳೆ ಹಲವೆಡೆ ಮಳೆ (Rain) ಮುನ್ಸೂಚನೆ ನೀಡಲಾಗಿದೆ. ರಾಯಲಸೀಮೆಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಟ್ರಫ್ ಹಿನ್ನೆಲೆ ಕೆಲವೆಡೆ ಧಾರಾಕಾರ ಗುಡುಗು ಮಿಂಚು ಸೇರಿ ಮಳೆ ಸುರಿಯಲಿದೆ.
ಬೆಂಗಳೂರು (Benagaluru) ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ 2 ದಿನ ವರುಣನ ಆರ್ಭಟ ಹೆಚ್ಚಿರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಚಾಮರಾಜನಗರ, ಕೊಡಗು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಮಳೆಯ ಅಬ್ಬರ ಕೊಂಚ ಜೋರಾಗೇ ಇತ್ತು. ನಿನ್ನೆ ಸಂಜೆ ಆರಂಭವಾದ ಮಳೆ ರಾತ್ರಿಯವರೆಗೂ ಸುರಿದಿದ್ದು ಅನೇಕ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಟ ನಡೆಸಿದರು