ಮುಂದಿನ ಎರಡ್ಮೂರು ದಿನಗಳಲ್ಲಿ ಮತ್ತೆ ಮಳೆಯ ಆರ್ಭಟ: ಹವಾಮಾನ ಇಲಾಖೆ

ಬೆಂಗಳೂರು: ಕಳೆದ 60 ಗಂಟೆಗಳಿಂದ ಕರಾವಳಿ, ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಮುಂದಿನ ಎರಡ್ಮೂರು ದಿನಗಳಲ್ಲಿ ಮಳೆ ಮತ್ತೆ ಚುರುಕು ಪಡೆಯುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಕೆಲ ಭಾಗಗಳನ್ನು ಹೊರತುಪಡಿಸಿದ್ರೆ, ಉಳಿದಂತೆ ಜುಲೈ 19ರವರೆಗೂ ರಾಜ್ಯದಲ್ಲಿ ಉತ್ತಮ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ (Rain) ಇಳಿಮುಖವಾದ ಕಾರಣ ಕೆಆರ್ಎಸ್, ಕಬಿನಿ, ಹಾರಂಗಿ ಜಲಾಶಯಗಳಿಗೆ ಒಳಹರಿವು ಸಹ ಕಡಿಮೆ ಆಗಿದೆ.
ಕೆಆರ್ಎಸ್ ಒಳಹರಿವು 7624 ಕ್ಯೂಸೆಕ್ಗೆ ಮತ್ತು ಕಬಿನಿಯ ಒಳಹರಿವು 4485 ಕ್ಯೂಸೆಕ್ಗೆ ಕುಸಿದಿದೆ. ಜುಲೈ 1ರಿಂದ ಈವರೆಗೂ ಕಬಿನಿ ಡ್ಯಾಂಗೆ 6.4 ಟಿಎಂಸಿ ನೀರು, ಕೆಆರ್ಎಸ್ಗೆ 4 ಟಿಎಂಸಿ ನೀರು ಬಂದು ಸೇರಿದೆ. ಮಲೆನಾಡಿನಲ್ಲಿ ಮಳೆ ಪರಿಣಾಮ ತುಂಗಭದ್ರಾ ಡ್ಯಾಂಗೆ ದಿನಕ್ಕೊಂದು ಟಿಎಂಸಿ ನೀರು ಸೇರುತ್ತಿದೆ. ಇತ್ತ ಬೆಂಗಳೂರಿನಲ್ಲಿ ಮಳೆ ಮತ್ತು ಮೋಡಗಳ ಕಣ್ಣಾಮುಚ್ಚಾಲೆ ಇವತ್ತು ಕೂಡ ಮುಂದುವರಿದಿತ್ತು.

Loading

Leave a Reply

Your email address will not be published. Required fields are marked *