ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋ ಮೂಲಕ ಖ್ಯಾತಿ ಘಳೀಸಿದ ರಘು ರಾಮಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ.
ಕಿರುತೆರೆಯ ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಲೈಫು ಸೂಪರ್ ಗುರು ರಿಯಾಲಿಟಿ ಶೋನಿಂದ ಕರ್ನಾಟಕ ಜನತೆಗೆ ಪರಿಚಿತರಾದ ರಘು ರಾಮಪ್ಪ ಅವರು ಫಿಟ್‌ನೆಸ್ ಪ್ರಿಯರಾಗಿದ್ದಾರೆ.
ಕೆಲವು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.
ಬಹುಕಾಲದ ಗೆಳತಿ ಅಶ್ವಿನಿ ಜೊತೆ ಮೇ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಸಮ್ಮುಖದಲ್ಲಿ ರಘು ರಾಮಪ್ಪ ಮದುವೆಯಾಗಿದ್ದಾರೆ. ರಘು ಮದುವೆ ಸಂಭ್ರಮದಲ್ಲಿ ‘ಗಾಳಿಪಟ’ ನಟಿ ನೀತು, ನಟ ಜಗ್ಗೇಶ್ ದಂಪತಿ ಸೇರಿದಂತೆ ಹಲವರು ಭಾಗಿಯಾಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.