ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಯುತ್ತಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನಟಿ ರಚಿತಾ ರಾಮ್ ಸೋಮವಾರ ಲಾಲ್ ಬಾಗ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ.
ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ.
ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದಾರೆ. ಕಾರು ನಿಲ್ಲಿಸದೇ ಕ್ಷಮೆಯಾಚನೆಯೂ ಮಾಡದೇ ಹೊರಟ ರಚಿತಾ ಹಾಗೂ ಡ್ರೈವರ್ ನಡೆಗೆ ಅಲ್ಲಿದ್ದವರು ಬೇಸರ ಮಾಡಿಕೊಂಡಿದ್ದಾರೆ.
ಆದರೆ ಇಂದು ಮಾಡಿದ ತಪ್ಪನ್ನ ಸರಿಮಾಡಿಕೊಂಡ ನಟಿ ರಚಿತರಾಮ್ . ಲಾಲ್ಬಾಗ್ ಕಾರ್ಮಿಕನ ಬಳಿ ಬಂದು ಭೇಟಿ ಮಾಡಿ ಕ್ಷಮೆಯಾಚಿಸಿದರು. ಇದು ಆಕಸ್ಮಿಕವಾಗಿ ನಡೆದ ಘಟನೆ ಆಗ ನನಗೆ ಗೊತ್ತಾಗಲಿಲ್ಲ ಎಂದು ಹೇಳಿ sorry ಅಂತಾ ತಮ್ಮ ದೊಡ್ಡಗುಣವನ್ನು ತೋರಿದ್ದಾರೆ.