ಬೆಂಗಳೂರು : 5 ವರ್ಷ ಮುಖ್ಯಮಂತ್ರಿ ಇರ್ತಾರೆ ಅಂತಾನೇ ಗ್ಯಾರಂಟಿ ಇಲ್ಲ. ಚುನಾವಣೆ ಗೆದ್ದ ಮೇಲೆ ಕಂಡೀಷನ್ ಹಾಕುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಚುನಾವಣೆ ಗೆದ್ದ ಮೇಲೆ ಗ್ಯಾರಂಟಿ ಬಗ್ಗೆ ಕಂಡೀಷನ್ ಹಾಕಿದ್ದಾರೆ.
ಇದು ಡಂಬಲ್ ಸ್ಟೇರಿಂಗ್ ಸರ್ಕಾರ, ಬಸ್ ಯಾವ ದಿಕ್ಕಿನಲ್ಲಿ ಸಾಗುತ್ತೋ ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.
ಪೊಲೀಸರು ಕೇಸರಿ ಶಾಲು ಹಾಕಿದ್ದಕ್ಕೆ ಡಿಕೆಶಿ ಎಚ್ಚರಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಭಾರತದ ತ್ರಿವರ್ಣಧ್ವಜ ಕೇಸರಿಯಿಂದಲೇ ಆರಂಭವಾಗುತ್ತದೆ. ಹನುಮಾನ್ ಸಂಕೇತ ಕೇಸರಿ, ಸ್ವಾಮೀಜಿಗಳ ಸಂಕೇತ ಕೇಸರಿ, ಕಾಂಗ್ರೆಸ್ ನವರಿಗೆ ಕೇಸರಿ ಮೇಲೆ ಏಕೆ ಕೋಪಾವೋ ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರು ಇದಕ್ಕೆ ಉತ್ತರ ಕೊಡುತ್ತದೆ ಎಂದರು.