ಪುದುಚೇರಿ: ಪುದುಚೇರಿ ಸಾರಿಗೆ (Puducherry Transport Minister) ಸಚಿವೆ ಚಂದ್ರ ಪ್ರಿಯಾಂಕಾ (Chandra Priyanka) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಲಿತ ಸಮುದಾಯದ ಮಹಿಳಾ ನಾಯಕಿಯಾಗಿ ಅನುಭವಿಸಿದ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಚಂದ್ರ ಪ್ರಿಯಾಂಕಾ ( ಅವರು ಅಖಿಲ ಭಾರತ NR ಕಾಂಗ್ರೆಸ್ನಿಂದ ಸಚಿವರಾಗಿದ್ದರು. ಅವರು ಕೇಂದ್ರಾಡಳಿತ ಪ್ರದೇಶದ 41 ವರ್ಷಗಳ ಇತಿಹಾಸದಲ್ಲಿ ಎರಡನೇ ಮಹಿಳಾ ಸಚಿವರಾಗಿದ್ದರು. ಪ್ರಬಲ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಿ ಸಚಿವೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಚಂದ್ರ ಪ್ರಿಯಾಂಕಾ ಕಾರೈಕಲ್ನ ಮೊದಲ ಮಹಿಳಾ ಸಚಿವೆ. ಇವರು ಪುದುಚೇರಿಯ ಮಾಜಿ ಸಚಿವ ಚಂದ್ರಕಾಸು ಅವರ ಪುತ್ರಿ. ಸಿಎಂಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಜನರ ಬೆಂಬಲವಿದ್ದರೂ ವಿಧಾನಸಭೆಯಲ್ಲಿ ಪ್ರಚಲಿತದಲ್ಲಿರುವ ವಂಚನೆಯ ರಾಜಕಾರಣ ಮತ್ತು ಸಂಪತ್ತಿನ ಅಸಾಧಾರಣ ಹಿಡಿತವನ್ನು ಎದುರಿಸುವುದು ಸವಾಲಿನ ಸಂಗತಿ ಎಂಬುದನ್ನು ನಾನು ಅರಿತುಕೊಂಡಿದ್ದೇನೆ.
ನಾನು ಆಗಾಗ್ಗೆ ಜಾತಿ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. 016 ರಲ್ಲಿ ನೆಡುಂಗಾಡು ಕ್ಷೇತ್ರದಿಂದ ಪುದುಚೇರಿ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. 2021 ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಅವರು ಅದೇ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಎ ಮಾರಿಮುತ್ತು ಅವರನ್ನು ಸೋಲಿಸಿದ್ದರು.