ಬಿಗ್ ಬಾಸ್ ಸ್ವರ್ಧಿಗಳ ವರ್ತನೆ ವಿರುದ್ಧ ಜನಾಕ್ರೋಶ: ಸ್ಫರ್ಧಿಗಳ ಅತಿರೇಕದ ವರ್ತನೆ ವಿರುದ್ಧ ಕ್ರಮಕ್ಕೆ ಆಗ್ರಹ

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಶೋ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರಾದ ಕೆವಿ ಪ್ರವೀಣ ಎಂಬುವವರು ದೂರು ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಇಮೇಲ್ ಹಾಗೂ ಅಂಚೆ ಮೂಲಕ ದೂರು ನೀಡಲಾಗಿದೆ.

ಈ ಕಾರ್ಯಕ್ರಮವು ತೀರ ನೈತಿಕ ಗುಣಮಟ್ಟವನ್ನು ಕಳೆದುಕೊಂಡಿದೆ. ಅಶ್ಲೀಲ ಪದ ಮತ್ತು ಚಪ್ಪಲಿಯಿಂದ ಹೊಡೆದಾಡುವ ದೃಶ್ಯಗಳು, ಬೆದರಿಕೆ ಹಾಕುತ್ತಿರುವುದು ಸ್ಪರ್ಧಿಗಳ ನಡುವೆ ಬಿತ್ತರಗೊಳ್ಳುತ್ತಿವೆ. ಇದು ಕೌಟುಂಬಿಕ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನೊಂದೆಡೆ ವ ಬಿಗ್ ಬಾಸ್ ಸ್ವರ್ಧಿಗಳ ವರ್ತನೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಕೆಲ ಸ್ಫರ್ಧಿ‌ಗಳ ಅತಿರೇಕದ ವರ್ತನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಲವು ಮಂದಿ ಟ್ವಿಟರ್(X)ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಟಾಸ್ಕ್ ವೇಳೆ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿಯಾಗಿದೆ. ಈ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಜನ ಆಗ್ರಹಿಸಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಸ್ವರ್ಧಿ ವಿನಯ್ ಗೌಡ ಇತರೆ ಸ್ವರ್ಧಿಗಳಿಗೆ ನೇರವಾಗಿ ಬೆದರಿಕೆ ಹಾಕ್ತಿದ್ದಾರೆ. ಸೆಕ್ಷನ್ 506 ಪ್ರಕಾರ ಸುಮೋಟೊ ಕೇಸ್ ಹಾಕುವಂತೆ ಟ್ವಿಟ್ ಮೂಲಕ‌ ಮನವಿ ಮಾಡಲಾಗುತ್ತಿದೆ. ಇನ್ನೂ ಕೆಲವು ಸ್ಪರ್ಧಿಗಳಿಂದ ವೈಲೆನ್ಸ್ ಆಗ್ತಿದೆ ಅಂತಲೂ ಕಿಡಿಕಾರಲಾಗಿದೆ.

Loading

Leave a Reply

Your email address will not be published. Required fields are marked *