ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕರೆಸಿ ಮಾತಾಡಿದರು. ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಕೆಂಪಣ್ಣ, ಕಳೆದ ಐದೂವರೆ ತಿಂಗಳಿಂದ ಬಾಕಿಯಿರುವ ಗುತ್ತಿಗೆದಾರರ ಬಿಲ್ ಗಳನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡುವ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ, ರಾಜ್ಯ ಹಣಕಾಸಿನ ಸ್ಥಿತಿ ಚೆನ್ನಾಗಿರದ ಕಾರಣ ತಡವಾಗುತ್ತಿದೆ ಎಂದು ಅವರು ಹೇಳಿದರು.
ಅಂತ ಕೆಂಪಣ್ಣ ತಿಳಿಸಿದರು. ಗುತ್ತಿಗೆದಾರರ ಬೇರೆ ಸಮಸ್ಯೆಗಳನ್ನು ಸಹ ಬಗೆಹರಿಸುವುದಾಗಿ ಅವರು ಹೇಳಿದ್ದಾರೆ ಮತ್ತು ಬಿಲ್ ಗಳನ್ನು ಕ್ಲೀಯರ್ ಮಾಡಲು ಲಂಚದ ಬೇಡಿಕೆ ಇಡುವ ಬಿಬಿಎಂಪಿ ಕಮೀಶನರ್ ಮತ್ತು ಚೀಫ್ ಎಂಜಿನೀಯರ್ ಅವರನ್ನು ಕರೆಸಿ ತಾಕೀತು ಮಾಡುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಕೆಂಪಣ್ಣ ತಿಳಿಸಿದರು.ಅಧಿಕಾರಿಗಳು ಎಷ್ಟು ಪರ್ಸೆಂಟ್ ಕಮೀಶನ್ ಗೆ ಬೇಡಿಕೆ ಇಡುತ್ತಾರೆ ಎಂದು ಸುದ್ದಿಗಾರರರು ಕೇಳಿದ್ದಕ್ಕೆ, ಪರ್ಸೆಂಟೇಜ್ ಬಗ್ಗೆ ಅವರು ಮಾತಾಡಿಲ್ಲ ನಾವು ಸಹ ಕೇಳಿಲ್ಲ, ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅಂಶವನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇವೆ ಎಂದು ಕೆಂಪಣ್ಣ ಹೇಳಿದರು.