ಖಾಸಗಿ ಸಾರಿಗೆ ಮುಷ್ಕರ ಆಯ್ತು ಈಗ ಅಂಗನವಾಡಿ ಕಾರ್ಯಕರ್ತೆಯರ ಸರದಿ

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆ ಬಿಸಿ ತಟ್ಟಿತ್ತಿದೆ. ನಿನ್ನೆಯಷ್ಟೇ ಖಾಸಗಿ ಸಾರಿಗೆ ಒಕ್ಕೂಟಗಳ ಬಿಸಿ ತಟ್ಟಗಾದ ಬೆನ್ನಲ್ಲೇ ಇದೀಗ ಮತ್ತೊಂದು ಟೆನ್ಷನ್ ಶುರುವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗವಾಡಿ ಕಾರ್ಯಕರ್ತೆಯರು ಸರ್ಕಾರ ವಿರುದ್ದ ಸಮರ ಸಾರೋಕೆ ಮುಂದಾಗಿದ್ದಾರೆ. ಸೆಪ್ಪೆಂಬರ್ 15 ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಹತಿ ಆರಂಭಿಸೋಕೆ ಆದೇಶ ಹೊರಡಿಸಿದೆ. ಈ ಆದೇಶದಿಂದ ರಾಜ್ಯದಲ್ಲಿರೋ ಅಂಗವಾಡಿ ಕೇಂದ್ರಗಳನ್ನ ಮುಚ್ಚೋ ಪರಿಸ್ಥಿತಿ ಬರಲಿದೆ.

ಈ ವರ್ಷದಿಂದ್ಲೇ ರಾಜ್ಯದಲ್ಲಿ 262 ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸೋಕೆ ನಿರ್ಧಾರ ಮಾಡಲಾಗಿದೆ. ಸರ್ಕಾರ ಯಾವದೇ ಕಾರಣಕ್ಕೂ ಸರ್ಕಾರಿ ಶಾಲೆಗಳಲ್ಲಿ ಯುಕೆಜಿ ಹಾಗೂ ಎಲ್ಕೆಜಿ ಆರಂಭಿಸಬಾರದು. ಶಿಕ್ಷಣ ಇಲಾಖೆ ಆದೇಶ ಹಿಂಪಡೆದು, ಇನ್ನೂ ಇದೇ ಕಾರಣಕ್ಕಾಗಿ ಸೆಪ್ಪೆಂಬರ್ 15 ರಂದು ಪ್ರತಿಭಟನೆ ಕರೆಯನ್ನ ಅಂಗವಾಡಿ ಕಾರ್ಯಕರ್ತೆಯ ಒಕ್ಕೂಟ ನೀಡಿದ್ದು, ನೂರಾರು ಅಂಗವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ನಿರ್ಧಾರವನ್ನ ವಿರೋಧಿಸಿ ಪ್ರತಿಭಟನೆ ಮಾಡಲಿದ್ದಾರೆ.

Loading

Leave a Reply

Your email address will not be published. Required fields are marked *