ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ಡ್ಯುಯೇಟ್…ಫಾರ್ ರಿಜಿಸ್ಟ್ರೇಷನ್ ಮತ್ತೊಂದು ಹಾಡು ರಿಲೀಸ್

“ಫಾರ್​ ರಿಜಿಸ್ಟ್ರೇಷನ್”​ ಸ್ಯಾಂಡಲ್​ವುಡ್​ನಲ್ಲಿ ನಾನಾ ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ನಟಿಸಿರುವ ಈ ಚಿತ್ರದ ಕದ್ದ ಕದ್ದ ಹಾಡನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಕಂ ನಟರಾಗಿರುವ ಡಾರ್ಲಿಂಗ್ ಕೃಷ್ಣ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಹಾಡು ಬಿಡುಗಡೆ ಬಳಿಕ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬ್ಯೂಟಿಫುಲ್ ಸಾಂಗ್. ನನಗೆ ತುಂಬಾ ಇಷ್ಟವಾಯಿತು. ಮೇಕಿಂಗ್ ವಿಚಾರ ಇರಬಹುದು. ಪೃಥ್ವಿ ಹಾಗೂ ಮಿಲನಾ ಇಬ್ಬರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಸಾಂಗ್ ಔಟ್ ಫುಟ್ ಚೆನ್ನಾಗಿ ಬಂದಿದೆ. ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಮಿಲನಾ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ವಂಡರ್ ಫುಲ್ ಆಕ್ಟರ್. ಇವರಿಬ್ಬರ ಕಾಂಬಿನೇಷನ್ ಕ್ಲಿಕ್ ಆಗುತ್ತದೆ ಎಂದರು.

ನಿರ್ಮಾಪಕರಾದ ನವೀನ್ ರಾವ್ ಮಾತನಾಡಿ, ಈ ಹಾಡು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿ ಇತ್ತು. ಇರ್ಮಾನ್ ಸರ್ ಅವರನ್ನು ಕನ್ವೆನ್ಸ್ ಮಾಡಿ ಎಲ್ಲೆಲ್ಲೋ ಹೋಗಿ ಬಂದ್ವಿ. ಆ ನಂತರ ಇಲ್ಲೇ ಶೂಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇದನ್ನು ಡಿಫರೆಂಟಾಗಿ ಮಾಡಬೇಕು ಎಂದು ಕೇಳಿಕೊಂಡಾಗ ಪ್ಲಾನ್ ಮಾಡಿ ಮಾಡಲಾಯಿತು. ಇಡೀ ಹಾಡಲ್ಲಿ ಪೃಥ್ವಿ ಹಾಗೂ ಮಿಲನಾ ಅಷ್ಟೇ ಕಾಣಬಹುದು. ಆದರೆ ತೆರೆ ಹಿಂದೆ 160 ಜನರ ಪರಿಶ್ರಮವಿದೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ಕಾಲೇಜ್ ಸಮಯದಲ್ಲಿ ಹಾಡು ಬರೆಯಲು ಯೋಚನೆ ಮಾಡುತ್ತಿದ್ದೇವು. ಆಗ ಸಮಯದಲ್ಲಿ ಬರೆದ ಹಾಡು ಇದು. ಈಗ ಅದನ್ನು ಬಳಸಿಕೊಂಡಿದ್ದೇವೆ. ನಕುಲ್ ಹಾಡಿಗೆ ಬೇರೆ ಆಯಾಮ ಕೊಟ್ಟಿದ್ದಾರೆ. ಪರ್ಫಾಮೆನ್ಸ್ ವಿಚಾರಕ್ಕೆ ಬಂದರೆ. ಯಾವ ರೀತಿ ಮಾಡುವುದು ಆದಾಗ ಸುಮಾರು ಐಡಿಯಾ ಬಂತು. ಅಂಡರ್ ವಾಟರ್ ಪ್ಲಾನ್ ಮಾಡಿದ್ದು ಇರ್ಮಾನ್ ಸರ್. ಅವರಿಗೆ ಕ್ರೆಡಿಟ್ ಸಲ್ಲಬೇಕು. ಇದೊಂದು ಒಳ್ಳೆ ಅನುಭವ. ಹಾಗೂ ಸಾಹಸ. ಮಿಲನಾ ಮತ್ತು ಪೃಥ್ವಿ ಬೆಂಬಲದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

Loading

Leave a Reply

Your email address will not be published. Required fields are marked *