ರಾಯಚೂರು: ಪ್ರಧಾನಿ ಮಂತ್ರಿಗಳು ದೇಶ್ಯಾದ್ಯಂತ 15000 ಬಸ್ ಕೊಡ್ತಿನಿ ಅಂತ ಹೇಳಿದ್ದಾರೆ. ಈ ಬಸ್ ಗಳು ಬಹಳ ದುಬಾರಿಯಾಗಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ರಾಯಚೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮಂತ್ರಿಗಳು ದೇಶ್ಯಾದ್ಯಂತ 15000 ಬಸ್ ಕೊಡ್ತಿನಿ ಅಂತ ಹೇಳಿದ್ದಾರೆ. ಈ ಬಸ್ ಗಳು ಬಹಳ ದುಬಾರಿಯಾಗಿವೆ. ಹೀಗಾಗಿ ಸಬ್ಸಿಡಿ ಕೊಡಬೇಕು. ಈ ಹಿಂದೆ ಸಬ್ಸಿಡಿ ಕೊಡುತ್ತಿದ್ದರು. ಈಗ ನಿಲ್ಲಿಸಿದ್ದಾರೆ. ಈಗ ಮತ್ತೆ ಸಬ್ಸಿಡಿ ಕೊಟ್ಟರೆ ನಗರ ಅಷ್ಟೇ ಅಲ್ಲ ಗ್ರಾಮೀಣ ಭಾಗದಲ್ಲೂ ಈ ಬಸ್ಗಳನ್ನ ಹಾಕಬಹುದು. ಈಗ 24000 ಬಸ್ ಗಳಿವೆ. 10 ವರ್ಷಗಳ ಹಿಂದೆಯೂ ಇಷ್ಟೆ ಬಸ್ಗಳಿದ್ದವು. ಈಗ ಜನಸಂಖ್ಯೆ ಹೆಚ್ಚಿರುವುದರಿಂದ ಇನ್ನೂ 10-12 ಸಾವಿರ ಬಸ್ಗಳ ಅವಶ್ಯಕತೆಯಿದೆ ಎಂದರು.