ಫ್ರಾನ್ಸ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಶ್ರೀಗಂಧದ ಸಿತಾರ್ ಅನ್ನು ಉಡುಗೊರೆಯಾಗಿ ನೀಡಿದರು.
ಜತೆಗೆ ಫ್ರೆಂಚ್ ಅಧ್ಯಕ್ಷರ ಪತ್ನಿ, ಫ್ರಾನ್ಸ್ ಪ್ರಧಾನಿ, ಫ್ರೆಂಚ್ ಸೆನೆಟ್ ಅಧ್ಯಕ್ಷರು ಮತ್ತು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಿಗೆ ವಿಶಿಷ್ಟ ಉಡುಗೊರೆಗಳನ್ನು ನೀಡಿದರು.
ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ನೀಡಿದ ಸಿತಾರ್ ಅನ್ನು ಶುದ್ಧ ಶ್ರೀಗಂಧದ ಮರದಿಂದ ಮಾಡಲಾಗಿದೆ. ಶ್ರೀಗಂಧದ ಕೆತ್ತನೆಯ ಕಲೆಯು ಒಂದು ಸೊಗಸಾದ ಮತ್ತು ಪ್ರಾಚೀನ ಕರಕುಶಲವಾಗಿದ್ದು, ಇದು ಶತಮಾನಗಳಿಂದ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿದೆ.
ಸರಸ್ವತಿ ದೇವಿಯ ಚಿತ್ರ
ಪ್ರಧಾನಿ ಮೋದಿ ನೀಡಿರುವ ವಿಭಿನ್ನ ಉಡುಗೊರೆಯು ಸಿತಾರ್ ಎಂಬ ಸಂಗೀತ ವಾದ್ಯವನ್ನು ಹಿಡಿದಿರುವ ಜ್ಞಾನ, ಸಂಗೀತ, ಕಲೆ, ಮಾತು, ಬುದ್ಧಿವಂತಿಕೆ ಮತ್ತು ಕಲಿಕೆಯ ಆರಾಧ್ಯ ದೇವತೆಯಾದ ಸರಸ್ವತಿ ದೇವಿಯ ಚಿತ್ರಗಳನ್ನು ಹೊಂದಿದೆ.