ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ: ಇನ್ಸ್ಪೆಕ್ಟರ್ ವಿರುದ್ಧ ಪತ್ನಿಯೆ ದೂರು

ಬೆಂಗಳೂರು: ಬಟ್ಟೆ ಬದಲಿಸುವಂತೆ ಮಹಿಳೆಯರನ್ನ ಬದಲಿಸುತ್ತಿದ್ದ ಎಂದು ಇನ್ಸ್ಪೆಕ್ಟರ್ ವಿರುದ್ಧ ಪತ್ನಿಯೆ ಎಫ್ ಐ ಆರ್ ದಾಖಲಿಸಿದ್ದಾರೆ. ಪತ್ನಿಗೆ ಏಮಾರಿಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸಂಬಂಧ ಇರಿಸಿಕೊಂಡಿದ್ದ ಮಹಿಳೆಗೆ ಏಮಾರಿಸಿ ಮತ್ತೊಬ್ಬಳ ಜೊತೆ ಸಂಪರ್ಕ ಹೊಂದಿದ್ನಂತೆ. ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದ ಎಂದು ಸಿಐಡಿ ಇನ್ಸ್ಪೆಕ್ಟರ್ ಬಿ ಮಲ್ಲಿಕಾರ್ಜುನ ವಿರುದ್ಧ ಪತ್ನಿ ಯಶವಂತಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. ವಂಚನೆ, ವರದಕ್ಷಿಣೆ ಪ್ರಕರಣದಲ್ಲಿ ಮಲ್ಲಿಕಾರ್ಜುನ್ ಹಾಗು ಆತನ ಅಣ್ಣ ಸಸ್ಪೆಂಡೆಡ್ ಕೆ ಎ ಎಸ್ ಮುನ್ಸಿಪಲ್ ಆಯುಕ್ತ ಬಸಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ.

ಮೊದಲು ಪತ್ನಿ ಭವಾನಿಯನ್ನ ಯಾಮಾರಿಸಿ ಶೈಲ ಪೂಜಾರಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಭವಾನಿ ಹಾಗು ಶೈಲಾ ಪೂಜಾರಿ ನಡುವೆ ಜಗಳ ನಡೆದಿತ್ತು. ನಂತರ ಬಸವೇಶ್ವರನಗರ ಠಾಣೆಗೆ ಸಬ್ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಇವರಿಬ್ಬರಿಗು ತಿಳಿಯದಂತೆ ದೂರು ನೀಡಲ ಬಂದ ಅಂಜಲಿ ಠಾಕೂರ್ ಎಂಬಾಕೆಯನ್ನ ಪರಿಚಯ ಮಾಡಿಕೊಂಡು ಪ್ರೀತಿಸುತ್ತಿದ್ರಂತೆ.ಈ ವಿಚಾರ ತಿಳಿದು ಬಸವೇಶ್ವರನಗರ ಪೊಲೀಸ್ ಠಾಣೆಗೆ ಬಂದು ಶೈಲಾ ಪೂಜಾರಿ ಗಲಾಟೆ ಮಾಡಿದ್ರಂತೆ. ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ್ದ ಶೈಲಾ ಪೂಜಾರಿ ಗಲಾಟೆ ನಡೆಸಿದ್ರಂತೆ. ಈ ವೇಳೆ ಮಲ್ಲಿಕಾರ್ಜುನ್ ಅಂಜಲಿ ಠಾಕೂರ್ ಳನ್ನೆ ಮದ್ವೆ ಮಾಡಿಕೊಳ್ತಿನಿ ಏನ್ ಬೇಕಾದ್ರು ಮಾಡ್ಕೊ ಎಂದು ಬೈದು ಕಳಿಸಿದ್ನಂತೆ.

ಸದ್ಯ ಮಲ್ಲಿಕಾರ್ಜುನನಿಗೆ ಬುದ್ದಿ ಕಲಿಸಲು ಪತ್ನಿ ಭವಾನಿ ಹಾಗು ಶೈಲಾ ಪೂಜಾರಿ ಒಂದಾಗಿದ್ದಾರೆ. ಹಣ ನೀಡುವಂತೆ ಪೀಡಿಸುತ್ತಿದ್ದಾನೆ , ಹಲ್ಲೆ ನಡೆಸ್ತಾನೆ ಎಂದು ಪತ್ನಿ ಭವಾನಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಸಹೋದರ ಬಸಪ್ಪ ಎಂಬಾತ ಕುಮ್ಮಕ್ಕು ಕೊಡ್ತಿದ್ದಾನೆಂದು ಆರೋಪ ಮಾಡಿದ್ದು, ಸದ್ಯ ಸಿಐಡಿಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಮಲ್ಲಿಕಾರ್ಜುನ್ ವಿರುದ್ದ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Loading

Leave a Reply

Your email address will not be published. Required fields are marked *