ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ, ಗಂಧಕ ಪತ್ತೆ ಮಾಡಿದ ಪ್ರಗ್ಯಾನ್ ರೋವರ್

ನವದೆಹಲಿ: ಚಂದ್ರನ (Moon) ಮೇಲ್ಮೈನಲ್ಲಿ ವೈಜ್ಞಾನಿಕ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 (Chandrayaan-3) ಮಿಷನ್‌, ದಕ್ಷಿಣ ಧ್ರುವದಲ್ಲಿ ಗಂಧಕ (Sulphur) ಇರುವುದನ್ನು ದೃಢಪಡಿಸಿದೆ ಎಂದು ಇಸ್ರೋ (ISRO) ತಿಳಿಸಿದೆ. ಚಂದ್ರಯಾನ-3 ರ ರೋವರ್ ಪ್ರಗ್ಯಾನ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣದಿಂದ ಮಾಪನಗಳನ್ನು ಮಾಡಲಾಗಿದೆ. ಅದರಲ್ಲಿ, ಚಂದ್ರನ ಮೇಲ್ಮೈನಲ್ಲಿ ಗಂಧಕ ಇರುವುದು ದೃಢವಾಗಿದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣ, ಆಮ್ಲಜನಕ ಇರುವುದು ಸಹ ಪತ್ತೆಯಾಗಿದೆ. ಜಲಜನಕ ಇದೆಯೇ ಎಂಬ ಬಗ್ಗೆ ವೈಜ್ಞಾನಿಕ ಅನ್ವೇಷಣೆ ನಡೆಯುತ್ತಿದೆ.

ಚಂದ್ರನ ಮೇಲ್ಮೈನಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ದೃಢಪಡಿಸಲಾಗಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ. ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್‌ ರೋವರ್‌ಗೆ ದೊಡ್ಡದೊಂದು ಕುಳಿ ಎದುರಾಗಿತ್ತು. ಈ ಕುಳಿ ರೋವರ್‌ಗೆ 3 ಮೀಟರ್‌ ದೂರದಲ್ಲಿ ಇತ್ತು. ನಂತರ ಇಸ್ರೋ ರೋವರ್ ಮಾರ್ಗವನ್ನು ಬದಲಾಯಿಸಿತ್ತು.

Loading

Leave a Reply

Your email address will not be published. Required fields are marked *