ಜೂನ್ 9ರಿಂದ 11ರ ವರೆಗೆ 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ. ಹೊಸೂರು, ಕೆಂಗ್ಲಾಪುರ, ಸೊರಲಮಾವು, ಕೊರಗೆರೆ, ಕೆಂಕೆರೆ, ಏಳ್ನಾಡು, ಸಿಂಗಾಪುರ, ಚಿಕ್ಕಬಿದರೆ, ನಂದಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಕಲ್ಲಹಳ್ಳಿ, ಸೀಗೆಬಾಗಿ, ಕೇಶವಪುರ, ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್, ಡಿ.ಕಟ್ಟಿಗೇನಹಳ್ಳಿ, ವಡಲೂರು ಕೆರೆ, ಮಾದಾಪುರ, ಸೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಸೋಮಲಾಪುರ ಟೌನ್, ಬಾಗೂರು, ಸಂಕಾಪುರ, ಗ್ಯಾರಹಳ್ಳಿ, ಕುರಿಕೆಂಪನಹಳ್ಳಿ, ವಿಶಾಕ, ಬ್ರಹ್ಮಸಂದ್ರ, ಬೊಮ್ಮನಹಳ್ಳಿ, ಕೋರ, ಕಟ್ಟಿಗೇನಹಳ್ಳಿ, ನೆಲಹಾಳ್, ಮಜ್ಜಿಗೆಕೆಂಪನಹಳ್ಳಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಇಎಚ್ಟಿ ಸಿಂಜೀನ್ ಮತ್ತು ಸುತ್ತಮುತ್ತಲಿನ ಪ್ರದೇಶ ತಾವರೆಕೆರೆ, ಟಿ.ಜಿ.ಹಳ್ಳಿ, ಗುಡೇಮಾರನಹಳ್ಳಿ ಮತ್ತು ವಿ.ಜಿ.ದೊಡ್ಡಿ ಉಪಕೇಂದ್ರಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.