ಬೆಂಗಳೂರು;- ಕೈಯಲ್ಲಿ ಮಚ್ಚು ಹಿಡಿದು ರೌಡಿಸಂ ಮಾಡಿದ್ದ ಪೊಲೀಸಪ್ಪನನ್ನು ಅಮಾನತು ಮಾಡಲಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯ ASI ಶ್ರೀನಿವಾಸ್ ಸಸ್ಪೆಂಡ್ ಆದ ಅಧಿಕಾರಿ ಎನ್ನಲಾಗಿದೆ. ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಲಾಟಿ ಹಿಡಿದು ಯುವಕರ ಮೇಲೆ ಪೊಲೀಸಪ್ಪ ದಾಳಿ ಮಾಡಿದ್ದ.
ನಡುರೋಡಲ್ಲಿ ಉಲ್ಟಾ ಮಚ್ಚಲ್ಲಿ ASI ಅಟ್ಯಾಕ್ ಮಾಡಿದ್ದ. ಕಳೆದ ತಿಂಗಳು 26 ರಂದು ಈ ಘಟನೆ ನಡೆದಿತ್ತು. ಅಪ್ಪನ ರೌಡಿಸಂ ಗೆ ಮಗ ಮತ್ತು ಮಗಳು ಸಾತ್ ಕೊಟ್ಟಿದ್ದರು. ಪೊಲೀಸ್ ರೌಡಿಯ ಅಟ್ಯಾಕ್ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಣ್ಣನ ಮಗನಿಗಾಗಿ ASI ರೌಡಿಸಂ ಮಾಡಿದ್ದ. FIR ದಾಖಲಾಗ್ತಿದ್ದಂತೆ ಶ್ರೀನಿವಾಸ್ ಎಸ್ಕೇಪ್ ಆಗಿದ್ದಾನೆ.