ಬೆಂಗಳೂರು: ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಎತ್ತರದ ಸ್ಥಳದಿಂದ ಹೆಚ್ಚಿನ ನಿಗಾವಹಿಸಲು ಸಾಧ್ಯವಾದ್ದರಿಂದ ಕುದುರೆಗಳ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಟ್ಟೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ವಾರಾಂತ್ಯದಲ್ಲಿ ಹೆಚ್ಚು ಜನ ಸೇರುವ ಕಬ್ಬನ್ ಪಾರ್ಕ್, ವಿಧಾನಸೌಧ, ಮೆಜೆಸ್ಟಿಕ್, ಎಂ ಜಿ ರಸ್ತೆಯಂಥಹ ಸ್ಥಳಗಳಲ್ಲಿ ಅಶ್ವಾರೋಹಿ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ.
ಜನಸಮೂಹದ ನಡುವೆ ಅನುಚಿತವಾಗಿ ವರ್ತಿಸುವವರು, ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅದಲ್ಲದೆ ಅಶ್ವದಳ ಬಳಕೆಗೆ ಕಾರಣ ಹೆಚ್ಚು ಎತ್ತರವಾಗಿರುತ್ತೆ ರಸ್ತೆಯಲ್ಲಿ ಅನುಚಿತ ವರ್ತನೆ ಮಾಡುವವರ ಬಗ್ಗೆ ಗಮನ ಹರಿಸಲು ಸಹಾಕಾರಿಯಾಗುತ್ತೆ ಅನ್ನೋ ಕಾರಣಕ್ಕೆ ಅಶ್ವದಳ ಬಳಕೆ ಎಂದು ಬಿ. ದಯಾನಂದ್ ಹೇಳಿದ್ದಾರೆ.