ಭಾರತ ತನ್ನ ಸಾಮರ್ಥ್ಯ ಹಂಚಿಕೊಳ್ಳಲು ಸಿದ್ಧ ಎಂದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಎಫ್‌ಐಪಿಐಸಿ (ಫೋರಂ ಫಾರ್ ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋಆಪರೇಶನ್) ಶೃಂಗಸಭೆಯಲ್ಲಿ ಹೊಸ ಉಪಕ್ರಮಗಳನ್ನ ಘೋಷಿಸಿದರು. 14 ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಾಯಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಹಿಂಜರಿಕೆಯಿಲ್ಲದೆ ಭಾರತವು ತನ್ನ ಸಾಮರ್ಥ್ಯಗಳನ್ನ ಅವರೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಹೇಳಿದರು.

 

ಫಿಜಿಯಲ್ಲಿ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಲಜಿ ಆಸ್ಪತ್ರೆ ತೆರೆಯಲಿದೆ ಭಾರತ.!
ಆರೋಗ್ಯ ರಕ್ಷಣೆ, ಸೈಬರ್ ಸ್ಪೇಸ್ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಂತಹ ಕ್ಷೇತ್ರಗಳಲ್ಲಿ ಹೊಸ ಅಭಿವೃದ್ಧಿ ಉಪಕ್ರಮಗಳನ್ನ ಪಿಎಂ ಮೋದಿ ಘೋಷಿಸಿದರು. ಫಿಜಿಯಲ್ಲಿ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಲಜಿ ಆಸ್ಪತ್ರೆಯನ್ನ ಸ್ಥಾಪಿಸಲು ಭಾರತ ನಿರ್ಧರಿಸಿದೆ ಮತ್ತು ಎಲ್ಲಾ 14 ಪೆಸಿಫಿಕ್ ದ್ವೀಪ ದೇಶಗಳಲ್ಲಿ ಡಯಾಲಿಸಿಸ್ ಘಟಕಗಳನ್ನ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಎಲ್ಲಾ 14 ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಸಾಗರ ಆಂಬ್ಯುಲೆನ್ಸ್ ಗಳನ್ನು ಒದಗಿಸಲಾಗುವುದು ಎಂದು ಅವರು ಘೋಷಿಸಿದರು.

Loading

Leave a Reply

Your email address will not be published. Required fields are marked *