ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು ತೆಂಗಿನ ಸಸಿ ನೆಟ್ಟರು. ಈ ವೇಳೆ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಕೆ ಸೋಮಶೇಖರ್ ಅವರು ಸಾಥ್ ಕೊಟ್ಟಿದ್ದಾರೆ. ಇನ್ನೂ ಸಸಿ ನೆಡುವ ಕಾರ್ಯಕ್ರಮ ಬಳಿಕ ಜೈಲಿಗೆ ಭೇಟಿದ ನ್ಯಾಯಾಧೀಶರು, ಜೈಲಿನ ಅಡುಗೆ ಮನೆ ಪರಿಶೀಲನೆ ನಡೆಸಿದರು. ಮುದ್ದೆ ತಯಾರಿಕರೆ, ಅನ್ನ ಸಾಂಬಾರ್ ವಿಭಾಗಕ್ಕೆ ಭೇಟಿ ನೀಡಿ, ಮುದ್ದೆ ತಯಾರಿಕೆ, ಅನ್ನ ಸಾಂಬಾರ್ ತಯಾರಿಕೆ ಬಗ್ಗೆ ಜೈಲು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ತರಕಾರಿ ಸಂಗ್ರಹ ಕೊಠಡಿಗೂ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಪ್ರಿಂಟಿಂಗ್ ,ನೇಯ್ಗೆ ಫರ್ನಿಚರ್, ಹಾಗು ಘಟಕಕ್ಕೆ ಭೇಟಿ ನೀಡಿ, ಕಾರಾಗೃಹದ ವ್ಯವಸ್ಥೆ ಬಗ್ಗೆ ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಇದೇ ವೇಳೆ ಸಜಾ ಬಂಧಿ ಹಾಗು ವಿಚಾರಣಾ ಕೈದಿಗಳಿಗೆ ಧೈರ್ಯ ತುಂಬಿದರು. ಮನುಷ್ಯ ಒಳ್ಳೆ ಪರಿಸರ ಸೃಷ್ಟಿಸಿಕೊಳ್ಳ ಬೇಕು ಆಗ ಮಾತ್ರ ಜೈಲಿಗೆ ಬರುವ ಸ್ಥಿತಿ ಬರುವುದಿಲ್ಲ. ಇಲ್ಲಿಂದ ಹೊರಗೆ ಬಂದ ಮೇಲೆ ಒಳ್ಳೆಯವರಾದಾಗ ಮಾತ್ರ ಜೀವನಕ್ಕೆ ಅರ್ಥ ಬರುತ್ತೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಕಾರ್ಯಕ್ರಮ ದಲ್ಲಿ ವಕೀಲರ ಸಂಘದ ಅದ್ಯಕ್ಷರು ಹಾಗು ಪದಾಧಿಕಾರಿಗಳು ಭಾಗಿಯಾಗಿದರು.