ಅಮರನಾಥ ಯಾತ್ರೆ ಕೈಗೊಂಡಿದ್ದ ಬಾಗಲಕೋಟೆ ಮೂಲದ ಯಾತ್ರಾರ್ಥಿಗಳು ಸೇಫ್

ಅಮರನಾಥ ಯಾತ್ರೆ  ಕೈಗೊಂಡಿದ್ದ ಬಾಗಲಕೋಟೆ ಮೂಲದ ಯಾತ್ರಾರ್ಥಿಗಳು ಸೇಫ್ ಆಗಿದ್ದಾರೆ. ಯಾತ್ರೆ ಕೈಗೊಂಡಿದ್ದ ಇನ್ನೂ ಅನೇಕ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜು. 2ರಂದು ಮಾಗಡಿಯಿಂದ ಅಮರನಾಥ ಯಾತ್ರೆಗೆ ಹೋಗಿದ್ದ ಯಾತ್ರಾರ್ಥಿಗಳು ಪ್ರವಾಹಕ್ಕೂ ಮುನ್ನವೇ ಅಮರನಾಥ ದರ್ಶನ ಮುಗಿಸಿದ್ದಾರೆ. ಬಳಿಕ ಶ್ರೀನಗರದ ವೈಷ್ಣೋದೇವಿ ದರ್ಶನಕ್ಕೆ ತೆರಳಲು ಮುಂದಾದ ಯಾತ್ರಾರ್ಥಿಗಳಿಗೆ ಪ್ರವಾಹ ಅಡ್ಡಿಯಾಗಿದೆ.
ಸದ್ಯ ಸಿಆರ್ಪಿಎಫ್ನ 46 ಕ್ಯಾಂಪ್ನಲ್ಲಿ ಯಾತ್ರಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಗಡಿಯಿಂದ ತೆರಳಿದ್ದ ಐವರು ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೇ ರಾಜ್ಯದ ಹಲವು ಮಂದಿ ಯಾತ್ರಾರ್ಥಿಗಳು ಸಿಆರ್ಪಿಎಫ್ ಕ್ಯಾಂಪ್ನಲ್ಲಿ ಸುರಕ್ಷಿತವಾಗಿದ್ದು, ಕೆಲವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಜಮ್ಮು-ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯಕ್ಕೆ ಯಾತ್ರೆ ಕೈಗೊಂಡಿದ್ದ 80 ಕ್ಕೂ ಹೆಚ್ಚು ಮಂದಿ ಕನ್ನಡಿಗರು ಪ್ರವಾಹದ ಕಾರಣಕ್ಕೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.

Loading

Leave a Reply

Your email address will not be published. Required fields are marked *