ಜೈಪುರ ;- ಮುಂಬರುವ ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 15 ರೂಪಾಯಿಯಾಗಲಿದ್ದು, ಇದರಿಂದ ಜನರಿಗೆ ಲಾಭವಾಗುವ ದಿನ ದೂರವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಪ್ರತಾಪ್ ಗಢದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಜನರು ಸರಾಸರಿ ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ಬಳಕೆಯ ವಾಹನಗಳನ್ನು ಬಳಸಿದಲ್ಲಿ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 15 ರೂಪಾಯಿಯಾಗಲಿದ್ದು, ಇದರಿಂದ ಜನರಿಗೆ ಲಾಭವಾಗುವ ದಿನ ದೂರವಿಲ್ಲ ಎಂದರು.
ಎಥೆನಾಲ್, ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮಾಲಿನ್ಯ ಮತ್ತು ಆಮದನ್ನು ಕಡಿಮೆ ಮಾಡಬಹುದಾಗಿದೆ. ರೈತರು ಎಥೆನಾಲ್ ಉತ್ಪಾದನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದು, ಇದರಿಂದ ರೈತರ ಆದಾಯ ಕೂಡಾ ದ್ವಿಗುಣಗೊಳ್ಳಲಿದೆ. ದೇಶಾದ್ಯಂತ ರೈತರನ್ನು ಇಂಧನ ಪೂರೈಕೆದಾರರನ್ನಾಗಿ ಮಾಡಬೇಕೆಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದು ಗಡ್ಕರಿ ಹೇಳಿದರು.