ಯಾದಗಿರಿ: ಜಗತ್ತಿನ ಜನ ವಿಶ್ವಾಸದಿಂದ ಭಾರತದ ಕಡೆ ನೋಡ್ತಿದ್ದಾರೆ. ಯುಕ್ರೇನ್ ಯುದ್ಧದಲ್ಲಿ ಸಿಲುಕಿದ್ದ 25 ಸಾವಿರ ವಿದ್ಯಾರ್ಥಿಗಳನ್ನ ಭಾರತಕ್ಕೆ ಕರೆತರಲಾಯ್ತು, ಜಗತ್ತಿಗೆ ಯೋಗವನ್ನ ಪರಿಚಯಿಸಿದವ್ರು ನರೇಂದ್ರ ಮೋದಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಯಾದಗಿರಿಯಲ್ಲಿ ಮಾತನಾಡಿದ ಅವರು ‘ಅರಬ್ ದೇಶದಲ್ಲಿ 25 ಎಕರೆ ಜಾಗ ತೆಗೆದುಕೊಂಡು ಗಣಪತಿ ದೇವಸ್ಥಾನ ಮಾಡಲಾಗುತ್ತಿದೆ. ಜನವರಿ 24ಕ್ಕೆ ಭವ್ಯ ರಾಮ ಮಂದಿರ ಉದ್ಘಾಟನೆ ಆಗುತ್ತೆ, ನರೇಂದ್ರ ಮೋದಿ ಅವರು ಸಾಂಸ್ಕೃತಿಕ ಭಾರತ ನಿರ್ಮಾಣ ಮಾಡುತ್ತಿದ್ದಾರೆ ಎಂದರು