ನವದೆಹಲಿ: 2024ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಲೋಕಸಭೆಯಲ್ಲಿ ಹೇಳಿದ ಪ್ರಧಾನಿ ಮೋದಿ, ವಿಪಕ್ಷಗಳ ಆಡೋ ಒಂದೊಂದು ಮಾತನ್ನ ಜನರು ನೋಡುತ್ತಿದ್ದಾರೆ. ಯಾವಾಗಲೂ ನಿರಾಸೆಯಿಂದಲೇ ವಿಪಕ್ಷಗಳು ಮಾತನಾಡುತ್ತಿವೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ, ಒಂದು ವಿಚಿತ್ರ ಇದೆ. 1999ರಲ್ಲೂ ಅವಿಶ್ವಾಸ ನಿರ್ಣಯವನ್ನ ಮಂಡಿಸಿದ್ದರು. ಶರದ್ ಪವಾರ್ ಅವರು ನೇತೃತ್ವದಲ್ಲಿ ಅವಿಶ್ವಾಸ ಮಂಡನೆ ಮಾಡಲಾಗಿತ್ತು. 2003ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗಲೂ ಮಂಡಿಸಲಾಗಿತ್ತು. ಆಗ ಸೋನಿಯಾ ಗಾಂಧಿ ವಿಪಕ್ಷ ನಾಯಕರಾಗಿದ್ದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದರು. ಅದೀರ್ ರಂಜನ್ ಅವರಿಗೆ ಏನಾಗಿದೆ ಗೊತ್ತಾಗುತ್ತಿಲ್ಲ. ಅದೀರ್ ರಂಜನ್ ಅವರಿಗೆ ಮಾತಾಡಲು ಬಿಡುತ್ತಿಲ್ಲ. ಕಾಂಗ್ರೆಸ್ನವರು ಅದೀರ್ ರಂಜನ್ ಅವರನ್ನ ನಿರ್ಲಕ್ಷಿಸಿದ್ದಾರೆ. ಗೊತ್ತಿಲ್ಲ ಕೋಲ್ಕತ್ತದಿಂದ ಫೋನ್ ಬಂದಿರಬೇಕು ಅನ್ಸುತ್ತದೆ ಎಂದು ಹೇಳಿದರು.