ಬೆಂಗಳೂರು: ಕೋವಿಡ್ ಮರೆತು ಬಾಳುತ್ತಿದ್ದ ಜನರ ನಡುವೆ ಈಗ ಜೆಎನ್.1ಉಪತಳಿ ದಿನೇದಿನೇ ಹೆಚ್ಚುತ್ತಿದೆ. ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ.ಈ ಹೊಸತಳಿಯ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲದಿದ್ದರೂ ಎಚ್ಚರಿಕೆಯಿಂದ ಇರಬೇಕು ಎನ್ನುವುದು ವೈದ್ಯರ ಅಭಿಪ್ರಾಯ.
ಕೊರೋನ ಮರೆತು ಆರಾಮವಾಗಿ ಬದುಕುತ್ತಿದ್ದ ಜನರಲ್ಲಿ ಈಗ ಮತ್ತೆ ಆತಂಕದ ವಾತಾವರಣ ಸೃಷ್ಟಿಸುತ್ತಿರುವ ಹೊಸ ವೈರಸ್ ಜೆಎನ್ 1. ಆದರೆ ಈ ವೈರಸ್ ನಿಂದ ದೊಡ್ಡ ಮಟ್ಟದ ತೊಂದರೆ ಇಲ್ಲ,ಜಾಗತಿಕ ಪಿಡುಗಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದರು ಸಹ ಈ ವೈರಾಣು ಹೆಚ್ಚು ಬೇಗ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಇನ್ನೂ ಈ ವೈರಾಣುವಿನ ಸಾಮಾನ್ಯ ಲಕ್ಷಣಗಳು ಶೀತ,ಜ್ವರ,ತಲೆನೋವು, ಮೂಗು ಕಟ್ಟುವುದು, ಕೆಮ್ಮು,ಕಫ ಮತ್ತು ವಾಸನೆ ಗೊತ್ತಾಗದಿರುವುದು.
ಇನ್ನೂ 60 ರಿಂದ65 ವರ್ಷ ಮೇಲ್ಪಟ್ಟವರು, ಮಧು ಮೇಹಿಗಳು,ಕ್ಯಾನ್ಸರ್ ಗೆ ಚಿಕಿತ್ಸೆಪಡೆಯುತ್ತಿರುವವರು,ಅಂಗಾಂಗ ಕಸಿ ಪಡೆದವರಲ್ಲಿ ಸೋಂಕು ತೀವ್ರ ವಾಗುವ ಸಾಧ್ಯತೆ ಹೆಚ್ಚಿದ್ದು,ಜಾಗ್ರತೆ ವಹಿಸಬೇಕು . ಹಾಗೂ ಜನದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ, ಆಸ್ಪತ್ರೆಗೆ ಭೇಟಿ ನೀಡುವಾಗ ಮಾಸ್ಕ್ ಧರಿಸುವುದು ಉತ್ತಮ ಮತ್ತು ಜನರು ಸ್ವಯಂ ಪ್ರೇರಿತವಾಗಿ ಮಾಸ್ಕ್ ದರಿಸಬೇಕು ಎಂದು ಸಲಹೆ ನೀಡುತ್ತಾರೆ.ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್.
ಇನ್ನೂ ಕೊರೋನ ವೈರಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಋತುಗಳಲ್ಲಿ ಜ್ವರದಂತೆಯೇ ಬಂದು ಆರೋಗ್ಯದಲ್ಲಿ ತುಸು ಏರಿಳಿತವನ್ನು ಉಂಟು ಮಾಡುತ್ತದೆ.ಈಗ ಬಂದಿರುವ ಜೆಎನ್.1ತಳಿಯ ಬಗ್ಗೆ ಆತಂಕಿತರಾಗದೆ ಜಾಗ್ರತೆ ವಹಿಸುವುದು ಮುಖ್ಯ. ಇದು ಚಳಿಗಾಲದ ಸಮಯವಾಗಿರುವುದರಿಂದ ಕೊರೊನಾ ಪ್ರಮಾಣ ಹೆಚ್ಚುವ ಸಾದ್ಯತೆ ಇದ್ದು ಇದು ಪೆಬ್ರವರಿ ಕೊನೆವರಗೊ ಮುಂದುವರಿಯುತ್ತದೆ. ಮತ್ತೆ ಮಕ್ಕಳಿಗೆ ಸ್ವಲ್ಪ ಪ್ರಮಾಣದ ಶೀತ ಕೆಮ್ಮು ಜ್ವೃರ ಇದ್ದರು ಪೋಷಕರು ಸ್ಕೂಲ್ ಗೆ ಕಳಿಸಬಾರದು ಈ ಋತಮಾನದಲ್ಲಿ ವೈರಸ್ ಹರಡುವ ಪ್ರಮಾಣ ಜಾಸ್ತಿ ಇರುತ್ತೆ ಎಂದರು
ಇನ್ನು ಅಹಾರ ಹೆಚ್ಚು ಪೋಷಕಾಂಶದಿಂದ ಕೂಡಿದ್ದು,ಮಿತ ವ್ಯಾಯಾಮ, ಒತ್ತಡ ರಹಿತ ಜೀವನವು ಯಾವುದೇ ರೋಗದ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ. ಕೊರೋನ ವೈರಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ,ಕೆಲವು ಋತುಗಳಲ್ಲಿ ಫ್ಲೂ ಜ್ವರದಂತೆಯೇ ಬಂದು ,ಆರೋಗ್ಯದಲ್ಲಿ ತುಸು ಏರಿಳಿತವನ್ನು ಉಂಟು ಮಾಡುತ್ತದೆ.ಈಗ ಬಂದಿರುವ ಜೆಎನ್.1ತಳಿಯ ಬಗ್ಗೆ ಆತಂಕಿತರಾಗದೆ ಜಾಗ್ರತೆ ವಹಿಸುವುದು ಮುಖ್ಯ.