ಬೆಂಗಳೂರು : ಹಣಕಾಸು ವಂಚನೆ ಆರೋಪದ ಮೇರೆಗೆ ಕಡ್ಡಿಪುಡಿ ಚಂದ್ರು ವಿರುದ್ಧ ಪಿ.ಸಿ ಶೇಖರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಕಿರಿಕ್ ಉಂಟಾಗಿದ್ದು, ಹಣ ನೀಡದೇ ವಂಚನೆ ಎಸಗಿದ್ದಾರೆ ಕಡ್ಡಿಪುಡಿ ಚಂದ್ರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಿಸಿ ಶೇಖರ್ ದೂರು ನೀಡಿದ್ದಾರೆ.
ಡಾರ್ಲಿಂಗ್ ಕೃಷ್ಣ ನಟಿಸಿದ್ದ ಪಿಸಿ ಶೇಖರ್ ಹಾಗೂ ಕಡ್ಡಿಪುಡಿ ಚಂದ್ರು ನಿರ್ಮಾಣದಲ್ಲಿ ತೆರೆಗೆ ಬಂದ ಲವ್ ಬರ್ಡ್ಸ್ ಸಿನಿಮಾ ನಿಮಗೆ ಗೊತ್ತಿದೆ. ಈ ಸಿನಿಮಾದ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕಿರಿಕ್ ಆಗಿದೆ. 20 ಲಕ್ಷ ರೂಪಾಯಿಗೆ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡಲು ಅಗ್ರಿಮೆಂಟ್ ಆಗಿತ್ತು. ಅಂತೆಯೇ ಪಿ.ಸಿ. ಶೇಖರ್ ಕೆಲಸ ಮಾಡಿದ್ದು, ಈ ನಡುವೆ ಸಿನಿಮಾ ಎಡಿಟಿಂಗ್ ಸಲುವಾಗಿ ಐದು ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಆಗಿತ್ತು. ಒಟ್ಟು 25 ಲಕ್ಷ ರೂಪಾಯಿ ಹಣವನ್ನು ನಿರ್ದೇಶಕರಿಗೆ ಕಡ್ಡಿಪುಡಿ ಚಂದ್ರು ನೀಡಬೇಕಿತ್ತು. ಆದರೆ ಅವರು 6.5 ಲಕ್ಷ ರೂ ಮಾತ್ರ ನೀಡಿ ವಂಚನೆ ಎಸಗಿದ್ದಾರೆ. ಉಳಿದ ಹಣ ಕೇಳಿದರೆ ಕಡ್ಡಿಪುಡಿ ಚಂದ್ರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಿಸಿ ಶೇಖರ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.