ಹೈದರಾಬಾದ್: ಕೇವಲ ಒಂದು ವಾರದ ಅಂತರದಲ್ಲಿ ಎನ್ಡಿಎ (NDA) ಮೈತ್ರಿಕೂಟಕ್ಕೆ ಎರಡನೇ ಶಾಕ್ ತಗುಲಿದೆ. ವಾರದ ಹಿಂದೆ ಎನ್ಡಿಎ ಮೈತ್ರಿಕೂಟವನ್ನು ತಮಿಳುನಾಡಿನ ಅಣ್ಣಾಡಿಎಂಕೆ (AIDMK) ಪಕ್ಷ ತೊರೆದಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷ (JanaSena Party) ಕೂಡ ಬಿಜೆಪಿಗೆ (BJP) ಶಾಕ್ ನೀಡಿದೆ. ಬದಲಾದ ಕಾಲಘಟ್ಟದಲ್ಲಿ ಜಗನ್ ಸರ್ಕಾರದ ವಿರುದ್ಧ ಸಿಡಿದಿರುವ ನಟ ಪವನ್ ಕಲ್ಯಾಣ್ (Pawan Kalyan) ತೆಲುಗುದೇಶಂ ಜೊತೆಗೂಡಿ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ.
ಕಷ್ಟಕಾಲದಲ್ಲಿ ಬಂಧಿತ ಚಂದ್ರಬಾಬು ನಾಯ್ಡ (Chandrababu Naidu) ಜೊತೆ ಇರಲು ಎನ್ಡಿಎ ಮೈತ್ರಿಕೂಟ ತೊರೆದಿದ್ದೇನೆ ಎಂದು ಅಧಿಕೃತವಾಗಿ ಪವನ್ ಕಲ್ಯಾಣ್ ಪ್ರಕಟಿಸಿದ್ದಾರೆ. ಟಿಡಿಪಿ-ಜನಸೇನೆ ಮೈತ್ರಿಯಿಂದ ವೈಎಸ್ಆರ್ ಕಾಂಗ್ರೆಸ್ (YSR Congress) ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತೆಲಂಗಾಣ ಚುನಾವಣೆ ಬಳಿಕ ತೆಲುಗುದೇಶಂ-ಜನಸೇನಾ ಪಕ್ಷಗಳು ಕಾಂಗ್ರೆಸ್ ಜೊತೆಗೂಡಬಹುದು ಎಂಬ ಸುದ್ದಿಯೂ ಹಬ್ಬಿದೆ.