ಬೆಂಗಳೂರು;- ಸಧ್ಯದ ಈಗಿನ ಪರಿಸ್ಥಿತಿ ನಮ್ಮ ಅಸ್ತಿತ್ವಕ್ಕಾಗಿಯೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಟಾಳ್ ನಾಗರಾಜು ಬೇಸರ ಹೊರ ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕನ್ನಡಿಗರು ತುಂಬ ನೋವಿನಲ್ಲಿ ಇದ್ದಾರೆ. ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಕನ್ನಡಿಗರು ಬೀದಿಗೆ ಇಳಿಯಬೇಕಿದೆ.ನನ್ನ ಉಸಿರು ಇರುವವರೆಗೂ ಕನ್ನಡಕ್ಕಾಗಿ ಹೋರಾಟ ಮಾಡುತ್ತೇನೆ. ಅನ್ನಭಾಷಿಕರ ಚಿತ್ರಗಳ ಪ್ರಸಾರವನ್ನು ಬಂದ್ ಮಾಡಬೇಕು. ಕನ್ನಡ ಶಾಲೆಗಳು ಮುಚ್ಚದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.ನ್ಯಾಯಾಲಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. 1962ರಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ನಾನು ಶಾಸಕನಾಗಿ ಆಯ್ಕೆನಾದೆ. ಆಗ ನನಗೆ 25 ವರ್ಷ ವಯಸ್ಸಾಗಿತ್ತು. ಜಾತಿ ಭೇಧವಿಲ್ಲದೆ ಜನರು ನನ್ನನ್ನು ಗೆಲ್ಲಿಸಿದರು. ಅವತ್ತು ಎಲ್ಲಿ ನೋಡಿದರೂ ಕನ್ನಡಿಗರು ತುಂಬಿದ್ದರು. ಈಗ ಚಿಕ್ಕಪೇಟೆ ಮಾರ್ವಡಿಪೇಟೆ ಆಗಿದೆ.
ರಾಜಧಾನಿಯಲ್ಲಿ ಪರಭಾಷಿಕರು ತುಂಬಿದ್ದಾರೆ. ಇದರ ಬಗ್ಗೆ ಕನ್ನಡಿಗರು ಜಾಗೃತರಾಗಬೇಕೆಂದು ವಾಟಾಳ್ ನಾಗರಾಜು ತಿಳಿಸಿದರು. 62 ವರ್ಷದಿಂದ ಮೈಸೂರು ವೃತ್ತದಲ್ಲಿ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ಆದರ್ಶ ಸಿಎಂಯಾಗಿದ್ದ ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯ ಅವರು ಸಮಾರಂಭಕ್ಕೆ ಚಾಲನೆ ನೀಡಿದವರು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. 61ವರ್ಷದಿಂದ ಕನ್ನಡ ಚಳವಳಿ ಹಾಗೂ 62 ವರ್ಷಗಳಿಂದ ಅಣ್ಣಮ್ಮದೇವಿಯ ಮೆರವಣಿಗೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಾಟಾಳ್ ನಾಗರಾಜು ವಿವರಿಸಿದರು