ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ನಂತರ ಅವರ ಬೆಂಬಲಿಗರು ದೇಶದಲ್ಲಿ ಗಲಭೆಗಳು ಮತ್ತು ಬೆಂಕಿ ಹಚ್ಚುವ ಮೂಲಕ ಪ್ರತಿಭಟಿಸುತ್ತಿದ್ದಾರೆ.
ಈ ಹಿನ್ನೆಲೆ, ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ರಾಷ್ಟ್ರದಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಮತ್ತು Twitter, Facebook ಮತ್ತು Youtube ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಖಾನ್ ಬಂಧನದ ನಂತರ ಪೊಲೀಸರು ಹಲವಾರು ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸಿದ್ದಾರೆ.
ಈ ಬಿಕ್ಕಟ್ಟಿನ ಮಧ್ಯೆ, ಪಾಕಿಸ್ತಾನಿ ನಟ ಸೆಹರ್ ಶಿನ್ವಾರಿ ಅವರು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಪ್ತಚರ ಸಂಸ್ಥೆ ರಾ ವಿರುದ್ಧ ದೂರು ದಾಖಲಿಸಲು ಕೋರಿದ್ದಾರೆ. ʻದೆಹಲಿ ಪೊಲೀಸರ ಆನ್‌ಲೈನ್ ಲಿಂಕ್ ಯಾರಿಗಾದರೂ ತಿಳಿದಿದೆಯೇ? ನನ್ನ ದೇಶ ಪಾಕಿಸ್ತಾನದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತೀಯ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ನಾನು ದೂರು ಸಲ್ಲಿಸಬೇಕಾಗಿದೆ. ಭಾರತೀಯ ನ್ಯಾಯಾಲಯಗಳು ಮುಕ್ತವಾಗಿದ್ದರೆ ಭಾರತೀಯ ಸುಪ್ರೀಂ ಕೋರ್ಟ್ ನನಗೆ ನ್ಯಾಯ ಒದಗಿಸುವುದು ಖಚಿತʼ ಎಂದು ಶಿನ್ವಾರಿ ಟ್ವೀಟ್‌ನಲ್ಲಿ ಬರೆದಿದ್ದಾರೆ.