ಗಯಾನಾ: ಪಾಕಿಸ್ತಾನ ತಂಡದಲ್ಲಿ ಎಲ್ಲಾ ಉತ್ತಮ ಬೌಲರ್ಗಳೇ ಇದ್ದಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
USAನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ರೋಹಿತ್, ಪಾಕಿಸ್ತಾನ ತಂಡದಲ್ಲಿ ಎಲ್ಲಾ ಉತ್ತಮ ಬೌಲರ್ಗಳೇ ಇದ್ದಾರೆ.
ಆದ್ರೆ ಪ್ರತ್ಯೇಕವಾಗಿ ನಾನು ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಹೆಸರು ತೆಗೆದುಕೊಂಡ್ರೆ ದೊಡ್ಡ ಕಾಂಟ್ರವರ್ಸಿ ಆಗುತ್ತೆ. ಒಬ್ಬ ಪ್ಲೇಯರ್ ಹೆಸರು ಹೇಳಿದ್ರೆ ಮತ್ತೊಬ್ಬರು ಸಹಿಸಲ್ಲ. ನನಗನ್ನಿಸುತ್ತೆ ಎಲ್ಲಾ ಬೌಲರ್ಗಳು ಉತ್ತಮವಾಗಿಯೇ ಇದ್ದಾರೆ ಎಂದು ಹೊಗಳಿದ್ದಾರೆ.
ಸದ್ಯ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನ ಮುನ್ನಡೆಸುತ್ತಿದ್ದಾರೆ. ಈಗಾಗಲೇ ವಿಂಡೀಸ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಸತತ 2 ಪಂದ್ಯಗಳಲ್ಲಿ ಸೋತಿರುವ ಟೀಂ ಇಂಡಿಯಾ ಮಾಡು ಇಲ್ಲವೇ ಮಡಿ ಹಂತದಲ್ಲಿದ್ದು, ಮುಂದಿನ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸುವ ಅನಿವಾರ್ಯತೆ ಇದೆ.