ಉದ್ಘಾಟನಾ ಪಂದ್ಯಕ್ಕೆ ಬರುವಂತೆ ಜಯ್ ಶಾಗೆ ಆಹ್ವಾನ ನೀಡಿದ ಪಾಕ್ ಕ್ರಿಕೆಟ್ ಮಂಡಳಿ

ಇಸ್ಲಾಮಾಬಾದ್‌: ಇದೇ ಆಗಸ್ಟ್‌ 30 ರಿಂದ ಪ್ರತಿಷ್ಟಿತ ಏಕದಿನ ಏಷ್ಯಾಕಪ್‌ (AsiaCup 2023) ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯಕ್ಕೆ ಪಾಕಿಸ್ತಾನಕ್ಕೆ ಬರುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಆಹ್ವಾನ ನೀಡಿದೆ. ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 17ರ ವರೆಗೆ ಏಕದಿನ ಏಷ್ಯಾಕಪ್‌ ಟೂರ್ನಿ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯಕ್ಕೆ ಜಯ್‌ ಶಾ (Jay Shah) ಜೊತೆಗೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನ (ACC) ಭಾಗವಾಗಿರುವ ಇತರ ಮಂಡಳಿಗಳ ಮುಖ್ಯಸ್ಥರನ್ನೂ ಆರಂಭಿಕ ಪಂದ್ಯಕ್ಕೆ ಆಹ್ವಾನಿಸಲಾಗಿದೆ ಎಂದು ಪಿಸಿಬಿ ತಿಳಿಸಿದೆ.

ಕೆಲ ದಿನಗಳ ಹಿಂದೆ ಐಸಿಸಿ ಸಭೆಗಾಗಿ ಡರ್ಬನ್‌ನಲ್ಲಿ ಭೇಟಿಯಾಗಿದ್ದಾಗ ಅಧ್ಯಕ್ಷ ಝಾಕಾ ಅಶ್ರಫ್, ಜಯ್ ಶಾ ಅವರಿಗೆ ಮೌಖಿಕವಾಗಿ ನೀಡಿದ್ದ ಮೌಖಿಕಿ ಆಹ್ವಾನವನ್ನು ಅವರು ಒಪ್ಪಿದ್ದರು. ಖಂಡಿತವಾಗಿಯೂ ಜಯ್‌ ಶಾ ಪಾಕಿಸ್ತಾನಕ್ಕೆ ಬರುತ್ತಾರೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ, ಭಾರತ ಮತ್ತು ಪಾಕಿಸ್ತಾನದ ನಡುವೆ ಅಸ್ತಿತ್ವದಲ್ಲಿರುವ ಸಂಬಂಧಗಳ ಬಗ್ಗೆ ತಿಳಿದಿರುವ ಪಿಸಿಬಿ, ಜಯ್‌ ಶಾ ಅವರಿಗೆ ಆಹ್ವಾನ ನೀಡುವ ಮೂಲಕ ಕ್ರೀಡೆಯೊಂದಿಗೆ ರಾಜಕೀಯ ಬೆರೆಸುವುದಿಲ್ಲ ಎಂಬುದನ್ನ ತೋರಿಸಿದೆ ಎಂದು ಹೇಳಲಾಗಿದೆ.

 

Loading

Leave a Reply

Your email address will not be published. Required fields are marked *