ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಆಸ್ತಿ ಮೌಲ್ಯ ಕೇಳಿದರೆ, ನಿಜಕ್ಕೂ ನೀವು ಶಾಕ್ ಹಾಗ್ತೀರಾ. ಕೊಹ್ಲಿ ಅವರ ನಿವ್ವಳ ಆಸ್ತಿ ಮೌಲ್ಯ 1,050 ಕೋಟಿ ರೂ. ಎಂದು ವರದಿಯೊಂದು ಬಹಿರಂಗಪಡಿಸಿದೆ. ಪ್ರಸ್ತುತ ಆಡುತ್ತಿರುವ ಕ್ರಿಕೆಟಿಗರ ಪೈಕಿ ಕಿಂಗ್ ಕೊಹ್ಲಿಯೇ ನಂ. 1 ಶ್ರೀಮಂತ.
ಕೊಹ್ಲಿ ಜಾಹೀರಾತುಗಳಿಂದ ವಾರ್ಷಿಕವಾಗಿ 175 ಕೋಟಿ ರೂ. ಗಳಿಸುತ್ತಾರೆ. ಬಿಸಿಸಿಐನಿಂದ ವಾರ್ಷಿಕ 7 ಕೋಟಿ ರೂ., ಐಪಿಎಲ್ನಿಂದ 15 ಕೋಟಿ ರೂ. ವೇತನ ಗಳಿಸುತ್ತಾರೆ. ವರ್ಷವೊಂದಕ್ಕೆ ಪ್ರತೀ ಜಾಹೀರಾತಿಗೆ 7ರಿಂದ 10 ಕೋಟಿ ರೂ. ಪಡೆಯುತ್ತಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.