ಬಿಜೆಪಿ ಸಿದ್ಧಾಂತದ ವಿರುದ್ಧ ನಮ್ಮ ಹೋರಾಟ: ರಾಹುಲ್​ ಗಾಂಧಿ

ಬೆಂಗಳೂರು: ಬಿಜೆಪಿ ಸಿದ್ಧಾಂತದ ವಿರುದ್ಧವೇ ನಮ್ಮ ಹೋರಾಟ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದೇಶದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದು ವಿಪಕ್ಷ, ಬಿಜೆಪಿ ವಿರುದ್ಧ ನಡೆಯುತ್ತಿರುವ ಹೋರಾಟವಲ್ಲ. ದೇಶದ ಧ್ವನಿಯನ್ನು ಅಡಗಿಸುತ್ತಿರುವವರ ವಿರುದ್ಧ ಹೋರಾಟ ಎಂದರು.ದೇಶದ ಜನರ ಧ್ವನಿ ಅಡಗುಸುತ್ತಿರುವವರ ವಿರುದ್ಧವೇ ನಮ್ಮ ಸಮರವಾಗಿದೆ. ಇದಕ್ಕಾಗಿ ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ. ಈ ಯುದ್ದ ಇಂಡಿಯಾ ಮತ್ತು ಎನ್​ಡಿಎ ನಡುವೆ ನಡೆಯಲಿದೆ. ಇಂಡಿಯಾ ಮತ್ತು ಮೋದಿ ನಡುವಿನ ಸಮರ ಇದಾಹೊದೆ. ಇಂಡಿಯಾ ವಿರುದ್ದ ಯಾರೇ ಸಮರ ಸಾರಿದರೂ ಅದರ ಪರಿಣಾಮ ಏನಾಗುತ್ತೆ ನಿಮಗೇ ಗೊತ್ತು ಎಂದರು.

Loading

Leave a Reply

Your email address will not be published. Required fields are marked *