ಮಂಡ್ಯ: ನಾನೇನಾದ್ರೂನು ದೇವೇಗೌಡ್ರು ಮಗ ಆಗಿದ್ರೆ ನನ್ನ ರಾಜಕೀಯ ಭವಿಷ್ಯ ಇವತ್ತೆ ಕೊನೆಯಾಗಿದ್ರು ದೇವೇಗೌಡ್ರುಗೆ ನೋವು ಕೊಟ್ಟು ರಾಜಕಾರಣ ಮಾಡ್ತಿರಲಿಲ್ಲ ಎಂದು ಹೆಚ್ಡಿಕೆ ವಿರುದ್ಧ ಮಂಡ್ಯದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಳೆಯ ಪಾರ್ಟಿ ಜೆಡಿಎಸ್, ನಾವಿದ್ದಂತಹ ಪಾರ್ಟಿ ಇವತ್ತು ಹೇಗಾಗಿದೆ.? ದೇವೇಗೌಡ್ರು ಇಲ್ಲಿವರೆಗೆ ಬಿಜೆಪಿ ಜೊತೆ ಎಂತಹ ಕಠಿಣವಾಗಿ ಮಾತನಾಡಿದನ್ನ ನಾನು ರಿಪಿಟ್ ಮಾಡಲ್ಲ.
ಆದ್ರೆ ಬಿಜೆಪಿ ಜೊತೆ ಸೇರಲ್ಲ ಅಂತ ದೇವೇಗೌಡ್ರು ಕಠಿಣವಾಗಿ ಹೇಳಿದ್ದಾರೆ. ಇವತ್ತು ಅವರನ್ನ ಇಳಿವಯಸ್ಸಿನಲ್ಲಿ ನಾನು ಅವರ ಮಗ ಆಗಿದ್ರೆ ನನ್ನ ರಾಜಕೀಯ ಭವಿಷ್ಯ ಇವತ್ತೆ ಕೊನೆಯಾಗಿದ್ರುನು ದೇವೇಗೌಡ್ರುಗೆ ನೋವು ಕೊಟ್ಟು ರಾಜಕಾರಣ ಮಾಡ್ತಿರಲಿಲ್ಲ ಎಂದು ಕಿಡಿಕಾರಿದರು. ಇನ್ನೂ ತಂದೆ ಬದುಕಿರುವುವಾಗಲೆ ಎರಡೂ ಬಾರಿ ಮುಖ್ಯಮಂತ್ರಿಯಾಗಿರುವ ಕರ್ನಾಟಕದಲ್ಲಿ ಇತಿಹಾಸ ಇದ್ಯ, ಯಾರು ಸಹ ಕೆಂಗಲ್ ಹನುಮಂತಯ್ಯರಿಂದ ಇಲ್ಲಿಯವರೆಗೆ ಬದುಕಿದ್ದಂಗೆ ಬೊಮ್ಮಯಿ ತೀರಿಕೊಂಡ ಬಳಿಕ ಬಸವರಾಜು ಬೊಮ್ಮಯಿ ಸಿಎಂ ಆಗಿದ್ದಾರೆ.