ಬಾಗಲಕೋಟೆ: “ಅವನೊಬ್ಬ ಯಾವುದೋ ಒಂದು ಸಭೆಯಲ್ಲಿ ಹೇಳಿದ್ದಾನೆ. ಅದನ್ನು ನೋಡಿ ನೋಡಿ ಸಾಕಾಗಿದೆ. ನೂರು ಜನ ಎಂಎಲ್ಎ ಗಳು ಹೇಳಿದ್ದಾರಾ?`” -ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಅಸಮಾಧಾನ ಸ್ಪೋಟ ವಿಚಾರವಾಗಿ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪೂರ ಅವರ ಪ್ರತಿಕ್ರಿಯೆ.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ರರಿಸಿದ ಅವರು, ಅವರ (ಹರಿಪ್ರಸಾದ್) ಶಕ್ತಿ ನಮಗೆ ಗೊತ್ತಿಲ್ಲ. ಎಂ.ಎಲ್.ಎಗಳು, ಹೈಕಮಾಂಡ್ ಹೇಳಿದ್ರೆ ಅದು ಒಂದು ಶಕ್ತಿ ಅಂತೀವಿ. ಎಂ.ಎಲ್.ಎ ಗಳೆಲ್ಲ ಸಿದ್ದರಾಮಯ್ಯ ಗೆ ಸಪೋರ್ಟ್ ಇದ್ದೀವಿ, ನಮ್ಮ ಹೈ ಕಮಾಂಡ್ ಸ್ಟ್ರಾಂಗ್ ಇದೆ ಎಂದು ಹೇಳಿದರು.ಹರಿಪ್ರಸಾದ್ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಎರಡು ಗುಂಪಾಗುತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಎಲ್ಲವೂ ಭ್ರಮೆ, ಸುಳ್ಳು. ಸುಮ್ಮನೆ ತವಡು ಕುಟ್ತಿದ್ದಾರೆ. ಎಲ್ಲೋ ಒಂದು ಕಡೆ ಕ್ರಿಯೆಟ್ ಮಾಡಲು ಗುದ್ದಾಡ್ತಿದ್ದಾರೆ. ಬಿಜೆಪಿ ಯವರು.ಆದ್ರೆ ಏನೂ ಆಗ.ಲ್ಲ. ಸುಮ್ಮನ್ನೇ ಗಾಳಿಗೆ ಗುದ್ದಿ ಕೈ ನೋವು ಮಾಡಿಕೊಳ್ಳುತ್ತಿದ್ದಾರೆ ಎಂದರು.