ಚಿಕ್ಕಮಗಳೂರು: ವಿರೋಧ ಪಕ್ಷದ ನಾಯಕ ಯಾರು ಎಂದು ನಾಳೆ ಗೊತ್ತಾಗಲಿದೆ ಎಂದು ಚಿಕ್ಕಮಗಳೂರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ರಾಜಕೀಯದ ಬಗ್ಗೆ ಚರ್ಚೆ ಮಾಡಲು ಇಷ್ಟು ದೂರ ಬರಬೇಕಾ? ಮಾಜಿ ಸಚಿವ ಆರ್.ಅಶೋಕ್ ಹುಟ್ಟುಹಬ್ಬಕ್ಕಾಗಿ ಬಂದಿದ್ದೇವೆ. ಸಮಯ ಸಿಕ್ತು, ಹಾಗಾಗಿ ಹುಟ್ಟುಹಬ್ಬ ಆಚರಿಸಲು ಬಂದಿದ್ದೇವೆ. ಹುಟ್ಟುಹಬ್ಬ ಆಚರಣೆ ಮಾಡಿ ಈಗ ವಾಪಸ್ ತೆರಳುತ್ತಿದ್ದೇವೆ ಎಂದರು.